ವಿಶ್ವ ಪರಿಸರ ಅಂಗವಾಗಿ ಜೂನ್ 1ರಿಂದ ವಿಮೋವೇ ಫೌಂಡೇಶನ್ ‘ಆಲ್ಟರ್ನೇಟಿವ್ 24’ ಕಾರ್ಯಕ್ರಮ:

ಜೂನ್ 1ರಿಂದ ವಿಶ್ವ ಪರಿಸರ ಅಂಗವಾಗಿ ನಡೆಯುತ್ತಿರುವ ‘ಆಲ್ಟರ್ನೇಟಿವ್ 24’ ಕಾರ್ಯಕ್ರಮವನ್ನು ಕುರಿತು ವಿಮೋವೇ ಫೌಂಡೇಶನ್ ಬೆಂಗಳೂರಿನ ಯುವಜನರಿಗೆ ಮತ್ತು ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ . ಈ ಬಾರಿ, ಬೆಂಗಳೂರಿನ ಯುವಕರನ್ನು ಉತ್ತೇಜಿಸುವ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಕ್ರಮವು ಜೂನ್ 1ರಂದು ಬೆಳಿಗ್ಗೆ ೧೦:೦೦ ಗಂಟೆಗೆ ರಾಮಯ್ಯ ಮೆಡಿಕಲ್ ಆಡಿಟೋರಿಯಂನಲ್ಲಿ ನಡೆಯುತ್ತದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪರಿಸರ ಈಲಾಖೆ, ಬಿಬಿಎಂಪಿ ಚೀಫ್ ಕಮಿಷನರ್ ಹಾಗೂ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮುಖ್ಯ ರೂವಾರಿ ವಿನಯ ಶಿಂಧೆ ವಿಮೋವೇ ಫೌಂಡೇಶನ್ನ ಮುಖ್ಯಸ್ಥ ನೇತೃತ್ವವನ್ನು ವಹಿಸಿದ್ದಾರೆ.

ಬೆಂಗಳೂರಿನ ಯುವಕರಿಗೆ ಪ್ರಶಸ್ತಿಗಳು: ಬೆಂಗಳೂರಿನ ಯೂನಿವರ್ಸಿಟಿ, ಕಾಲೇಜುಗಳಲ್ಲಿ ಸಾಮಾಜಿಕ ಸಂದೇಶದ ವಿಡಿಯೋ ರೀಲ್ಸ್ ಗಳಲ್ಲಿ ಭಾಗವಹಿಸಿರುವ ಯುವಕರಿಗೆ ಪ್ರಶಸ್ತಿಗಳು ನೀಡಲಾಗುವದು.

ಎರಡು ತಿಂಗಳ ಪರಿಸರದ ಅಭಿಯಾನದ ಯೂತ್ ಫಾರ್ ಗ್ರೀನ್ ಆ್ಯಂಡ್ ವೈಬ್ರಂಟ್ ಬೆಂಗಳೂರು ಸಮೀಕ್ಷೆಯಲ್ಲಿ ಯುವಕರು ಭಾಗವಹಿಸಿದ್ದಾರೆ . ಅದು ಕೂಡ ಅಂದಿನ ಕಾರ್ಯಕ್ರಮದಲ್ಲಿ ಸರ್ವೇ ಮುಖಾಂತರ ಹೊರಹೊಮ್ಮಲಿದೆ.

ಹಸಿರು ಬೆಂಗಳೂರು ಕಾರ್ಯಕ್ರಮ: ಯೂತ್ ಫಾರ್ ಗ್ರೀನ್ ಆ್ಯಂಡ್ ವೈಬ್ರಂಟ್ ಬೆಂಗಳೂರು ಹೆಸರಿನ ಕಾರ್ಯಕ್ರಮ .ಈ ಕಾರ್ಯಕ್ರಮದಲ್ಲಿ ಹಸಿರು ಬೆಂಗಳೂರಿನ ಮತ್ತು ಅದರ ಸ್ಥಿರತೆಗೆ ಯುವಕರ ಪಾತ್ರವನ್ನು ಮಾತುಕತೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸರ್ಕಾರದ ವಿವಿಧ ಇಲಾಖೆಯ ಹಲವಾರು ಐಎಎಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ .

ಈ ಕಾರ್ಯಕ್ರಮಕ್ಕೆ ಬಿಬಿಎಂಪಿ , ಕರ್ನಾಟಕ ಸರ್ಕಾರದ ಸೇವಾ ಯೋಜನಾ,ಯುವ ಸಬಲೀಕರಣ ಮತ್ತು ಪರಿಸರ ಈಲಾಖೆಗಳ ಸಹಯೋಗ ನೀಡೀದೆ ಎಂದು ಫೌಂಡೇಶನ್ ತಿಳಿಸಿದೆ.
ಸಾರ್ವಜನಿಕರು ಮತ್ತು ಯವಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!