‘ಕೆರೆಬೇಟೆ’ ಸಿನಿಮಾದ ನಿರ್ಮಾಪಕ ನಟ ಗೌರಿ ಶಂಕರ್ ಸದ್ಯಕ್ಕೆ ಸಿನಿಮಾ ನಿರ್ಮಾಣ ಮಾಡದೇ ಇರಲು ನಿರ್ಧರಿಸಿದ್ದಾರೆ.
ಗೌರಿಶಂಕರ್ ನಟಿಸಿ, ರಾಜ್ ಗುರು ನಿರ್ದೇಶಿಸಿದ ‘ಕೆರೆಬೇಟೆ’ ಸಿನಿಮಾ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಸಕ್ಸಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗೌರಿ ಶಂಕರ್ ಸಿನಿಮಾಗಾಗಿ ಶ್ರಮಿಸಿದವರಿಗೆ ನೆನಪಿನ ಕಾಣಿಕೆಗಳನ್ನು ಕೊಟ್ಟಿದ್ದಾರೆ. ಇದೇ ವೇಳೆ ಗೌರಿ ಶಂಕರ್ ಸಿನಿಮಾ ನಿರ್ಮಾಣ ಮಾಡದೇ ಇರಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.
” ಕೆಲವು ವರ್ಷಗಳ ಕಾಲ ಪ್ರೊಡಕ್ಷನ್ ಅನ್ನು ಮಾಡುವುದಿಲ್ಲ. ಕೇವಲ ನಟನೆಯ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಒಳ್ಳೆಯ ನಿರ್ದೇಶಕ, ನಿರ್ಮಾಪಕರಿಂದ ಅವಕಾಶಗಳು ಬಂದರೆ ಅವರಿಗೆ ಬೆನ್ನೆಲುಬಾಗಿರುತ್ತೇನೆ” ಎಂದು ಗೌರಿಶಂಕರ್ ಹೇಳಿದ್ದಾರೆ.
“ಸಿನಿಮಾ ಕಮರ್ಷಿಯಲಿ ದೊಡ್ಡ ಮಟ್ಟಕ್ಕೆ ಹಿಟ್ಟಾಗಿಲ್ಲ. ಆದರೆ ಜನ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ. ಜನ ಕೆರೆಬೇಟೆ ಹೀರೋ ಎಂದು ಗುರುತಿಸುತ್ತಾರೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ 50 ದಿನಗಳು ಓಡಿದೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಇದೆ” ಎಂದು ಗೌರಿಶಂಕರ್ ಹೇಳಿದ್ದಾರೆ.
‘ಕೆರೆಬೇಟೆ’ ಸಿನಿಮಾ ಅದ್ಭುತವಾಗಿ ಮೂಡಿ ಬಂದಿತ್ತು. ಸಿನಿಮಾ ನೋಡಿವರಿಗೂ ವಿಶೇಷ ಅನುಭವ ಕೊಟ್ಟಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಾಣಲು ಸಾಧ್ಯವಾಗಲಿಲ್ಲ. ಈ ಬೇಸರದಲ್ಲಿ ಗೌರಿ ಶಂಕರ್ ಇದ್ದಾರೆ.
ಮಲೆನಾಡಿನ ಹಳ್ಳಿ ಸೊಗಡಿನ ಚಿತ್ರ ‘ಕೆರೆಬೇಟೆ’ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಗೌರಿ ಶಂಕರ್ ಅವರ ಜನಮನ ಸಿನಿಮಾ ಸಂಸ್ಥೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಸಿನಿಮಾ ಮಲೆನಾಡಿನ ಮೀನು ಬೇಟೆಯಾಡುವ ಸಂಸ್ಕೃತಿಯನ್ನು ಪರಿಚಯಿಸಿತ್ತು.
ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Be the first to comment