ಕಿಚ್ಚ ಸುದೀಪ್ ನಾಯಕರಾಗಿರುವ ‘ಮ್ಯಾಕ್ಸ್’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವೊಂದು ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ.
ಮ್ಯಾಕ್ಸ್ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಚೆನ್ನೈನಲ್ಲಿ ವಿಶೇಷ ಸೆಟ್ ಹಾಕಿ ಚಿತ್ರೀಕರಿಸಲಾಗಿತ್ತು. ಇದೀಗ ಕ್ಲೈಮ್ಯಾಕ್ಸ್ ಸನ್ನಿವೇಶದ ಭೀಭತ್ಸ ದೃಶ್ಯವೊಂದು ಆನ್ ಲೈನ್ ನಲ್ಲಿ ಹರಿದಾಡುತ್ತಿದ್ದಾರೆ. ಸುತ್ತಲೂ ತಮಟೆ, ಡೋಲು ಬಡಿಯುವವರು, ತ್ರಿಶೂಲ ಹಿಡಿದವರೂ ಇದ್ದಾರೆ. ಕಿಚ್ಚ ಸುದೀಪ್ ಮಾಸ್ ಅವತಾರದಲ್ಲಿ ಎಂಟ್ರಿ ಕೊಡುವ ಫೋಟೋವೊಂದು ಹರಿದಾಡಿದೆ.
ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಹಿಂದೆಂದೂ ಕಾಣದ ಅದ್ಭುತ ಸಾಹಸ ಸನ್ನಿವೇಶಗಳಿವೆ ಎನ್ನಲಾಗಿತ್ತು. ಇತ್ತೀಚೆಗಷ್ಟೇ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು. ಕ್ಲೈಮ್ಯಾಕ್ಸ್ ದೃಶ್ಯ ಆನ್ ಲೈನ್ ನಲ್ಲಿ ಲೀಕ್ ಆಗುತ್ತಿದ್ದಂತೇ ನಾನಾ ವಿಧದ ಕಾಮೆಂಟ್ ಗಳು ಬಂದಿವೆ.
ಫೋಟೋ ನೋಡಿ ಅಭಿಮಾನಿಗಳು ಇದನ್ನು ನೋಡುತ್ತಿದ್ದರೇ ಕ್ಲೈಮ್ಯಾಕ್ಸ್ ಹೇಗಿರಬಹುದು ಎಂದು ಕಲ್ಪನೆ ಮಾಡಿಕೊಳ್ಳಬಹುದು. ಈ ಸನ್ನಿವೇಶವನ್ನು ಥಿಯೇಟರ್ ನಲ್ಲಿ ನೋಡಲು ಕಾಯುತ್ತಿದ್ದೇವೆ. ಇದಕ್ಕೆ ಅಜನೀಶ್ ಹಿನ್ನಲೆ ಸಂಗೀತವೂ ಸೇರಿದರೆ ಅತ್ಯುತ್ತಮ ದೃಶ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
——
Post Views:
263
Be the first to comment