ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿರುವ ಬಹುನಿರೀಕ್ಷಿತ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11 ಕ್ಕೆ ರಿಲೀಸ್ ಆಗುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ.
ಜ್ಯೂ ಎನ್ ಟಿಆರ್ ಅವರ ಪ್ಯಾನ್ ಇಂಡಿಯಾ ಸಿನಿಮಾ ದೇವರ ಅಕ್ಟೋಬರ್ 10 ಕ್ಕೆ ಬಿಡುಗಡೆಯಾಗುತ್ತಿದೆ. ಅದರ ಮರುದಿನವೇ ಮಾರ್ಟಿನ್ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಧೈರ್ಯ ಮಾಡಿದೆ.
ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಐದು ಭಾಷೆಯಲ್ಲಿ ತೆರೆಗೆ ಬರಲಿದೆ. ಇದು ಧ್ರುವ ಸರ್ಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ.
ವಿಜಯದಶಮಿ ಹಬ್ಬಕ್ಕೆ ನಮ್ಮ ಕನ್ನಡ ಸಿನಿಮಾ ಕೊಡುಗೆ ನೀಡಬೇಕು ಎಂದು ಮಾರ್ಟಿನ್ ಬಿಡುಗಡೆ ಮಾಡುತ್ತಿದ್ದೇವೆ. ಕನ್ನಡ ನಾಡಿನ ಹಬ್ಬಕ್ಕೆ ಕನ್ನಡ ಸಿನಿಮಾ ರಿಲೀಸ್ ಆಗದಿದ್ದರೆ ಹೇಗೆ ಎಂದು ಧ್ರುವ ಸರ್ಜಾ ಪ್ರಶ್ನಿಸಿದ್ದಾರೆ.
ಯಾವುದೇ ಫ್ರೇಮ್ ನಲ್ಲೂ ರಾಜಿಯಾಗದೇ ಸಿನಿಮಾ ಮಾಡಿದ್ದೇವೆ. ಈ ಸಿನಿಮಾ ನಿಮ್ಮ ಸಿನಿಮಾ. ದಯವಿಟ್ಟು ಸಿನಿಮಾ ನೋಡಿ, ನಿಮ್ಮೆಲ್ಲಾ ಸ್ನೇಹಿತರಿಗೆ ಹೇಳಿ ಎಂದು ಧ್ರುವ ಮನವಿ ಮಾಡಿದ್ದಾರೆ.
ಧ್ರುವ ಸರ್ಜಾ ಸಿನಿಮಾ ಬಿಡುಗಡೆಯಾಗದೇ ಮೂರು ವರ್ಷವಾಗುತ್ತಾ ಬಂದಿದೆ. ಮಾರ್ಟಿನ್ ಸಿನಿಮಾ ರಿಲೀಸ್ ದಿನಾಂಕ ಘೋಷಿಸಿದ ಬೆನ್ನಲ್ಲೇ ಇನ್ನು ಮುಂದೆ ಯಾವತ್ತೂ ಸಿನಿಮಾ ಲೇಟ್ ಮಾಡಲ್ಲ ಎಂದು ಧ್ರುವ ಪ್ರಾಮಿಸ್ ಮಾಡಿದ್ದಾರೆ.
ಮಾರ್ಟಿನ್ ಧ್ರುವ ಸರ್ಜಾ ನಟನೆಯ 5ನೇ ಸಿನಿಮಾವಾಗಿದ್ದು, ಎಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಉದಯ್ ಮೇಹತಾ ಬಿಗ್ ಬಜೆಟ್ ಸಿನಿಮಾವನ್ನು ಬಲು ಅದ್ದೂರಿಯಾಗಿ ನಿರ್ಮಿಸಿದ್ದಾರೆ.
ಮಾರ್ಟಿನ್ ಸಿನಿಮಾದ ಆಡಿಯೊ ಹಕ್ಕು ಬಹು ಕೋಟಿಗೆ ಸೇಲ್ ಆಗಿದೆ. ಜನಪ್ರಿಯ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕನ್ನ ಪಡೆದುಕೊಂಡಿದೆ. ಕನ್ನಡದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಡಿಯೋ ಎನ್ನುವ ಹೆಗ್ಗಳಿಕೆ ಮಾರ್ಟಿನ್ ಸಿನಿಮಾದ ಪಾಲಾಗಿದೆ.
Be the first to comment