ಕಮಲ್ ಹಾಸನ್ ನಟಿಸಿ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಇಂಡಿಯನ್-2 ಚಿತ್ರ ಜುಲೈ 12ರಂದು ಚಿತ್ರ ಬಿಡುಗಡೆ ಆಗಲಿದೆ.
ಇಂಡಿಯನ್-2 ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು,ಕಮಲ್ ಹಾಸನ್ ಎಕ್ಸ್ ನಲ್ಲಿ ಚಿತ್ರದ ಬಿಡುಗಡೆ ಸುದ್ದಿಯನ್ನು ಪ್ರಕಟಿಸಿದ್ದಾರೆ.
ಚುನಾವಣೆ, ಮತದಾನ ಕುರಿತ ಕಥಾ ಸಾರಂಶ ಹೊಂದಿರುವ ಇಂಡಿಯನ್-2 ಕುತೂಹಲ ಕೆರಳಿಸಿದೆ. ಪೋಸ್ಟರ್ ನಲ್ಲಿ ಕಮಲ್ ಹಾಸನ್ ಬಿಳಿ ಬಣ್ಣದ ತಲೆಗೂದಲು, ಹಳೆಯ ಮುದುಕನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಏಕ್ ಹಿಂದೂಸ್ತಾನಿ, ಏಕ್ ವೋಟ್, ಏಕ್ ಆವಾಜ್ (ಒಂದು ದೇಶ, ಒಂದು ಮತ, ಒಂದು ಧ್ವನಿ) ಘೋಷವಾಕ್ಯದೊಂದಿಗೆ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಮೊನಿಶಾ ಕೊಯಿರಾಲಾ, ಊರ್ಮಿಳಾ ಮಾತೊಂಡ್ಕರ್ ಜೊತೆ ಕಮಲ್ ಹಾಸನ್ ನಟಿಸಿದ್ದ ‘ಇಂಡಿಯನ್’ ಚಿತ್ರ ಸೂಪರ್ ಹಿಟ್ ಆಗಿತ್ತು.
—–

Be the first to comment