ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರ ನಾಳೆ ಸಂಜೆ 6 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ಬಗ್ಗೆ ಉದಯ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಅಪ್ಲೋಡ್ ಮಾಡಿದೆ.
ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರ ಕಳೆದ ವರ್ಷ ನವೆಂಬರ್ 23ರಂದು ರಾಜ್ಯದ್ಯಂತ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಸಿನಿಮಾ ಇದೀಗ ಕಿರು ತೆರೆಯಲ್ಲಿ ಪ್ರಸಾರ ಆಗುತ್ತಿದೆ.
ಈ ಚಿತ್ರವನ್ನು ಸ್ಟುಡಿಯೋ 18 ಬ್ಯಾನರ್ ನಲ್ಲಿ ಸುಧೀರ್ ಕೆಎಂ ನಿರ್ಮಾಣ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಪಾತ್ರದಲ್ಲಿದ್ದಾರೆ.
ತಾರಾಗಣದಲ್ಲಿ ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜಾ, ಅರಸು, ಬ್ಯಾಂಕಾಕ್ ದಿಲೀಪ್, ತಾವರೆಕೆರೆ ರಘು, ರೋಚಿತ್, ತ್ರಿವಿಕ್ರಮ್, ಕಾರ್ತಿ ಸೌಂದರಂ, ಪ್ರಿಯಾಂಕಾ ಕುಮಾರ್, ಸಚ್ಚಿದಾನಂದ್, ಬಿಆರ್ ಶ್ರೀನಿವಾಸ, ಪೂರ್ಣಚಂದ್ರ ಮೈಸೂರು, ಪ್ರಶಾಂತ್, ನಿರಂಜನ್, ಮೈಸೂರು ರಘು, ರಾಜು ಹಿರೇಮಠ್, ವಿಜಯ್ ಬೆಳಗಾಂ, ಪಂಕಜ್ ಬಾಬು, ಸೋಮ ಅರ್ಜುನಗಿ, ವಿಕ್ರಮ್, ಗಣೇಶ್, ಸೋಮ, ಚಂದು ಇದ್ದಾರೆ.
ಚಿತ್ರಕ್ಕೆ ಮಾಸ್ತಿ ಮತ್ತು ಅಮ್ರಿ ಸಂಭಾಷಣೆ, ರವಿವರ್ಮ ಸಾಹಸ ನಿರ್ದೇಶನ, ಬಿ ಧನಂಜಯ್ ನೃತ್ಯ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ದನಪಾಲ್ ಮತ್ತು ರಾಜು ಛಾಯಾಗ್ರಹಣವಿದೆ.
ಚಿತ್ರ ಮಂದಿರಗಳಲ್ಲಿ ಚಿತ್ರ ನೋಡದವರು ಕಿರು ತೆರೆಯಲ್ಲಿ ಚಿತ್ರ ನೋಡಬಹುದಾಗಿದೆ.

Be the first to comment