ಚಿತ್ರ: ರಾಮನ ಅವತಾರ
ನಿರ್ದೇಶನ: ವಿಕಾಸ್ ಪಂಪಾಪತಿ
ನಿರ್ಮಾಣ: ಅಮರೇಜ್ ಸೂರ್ಯವಂಶಿ
ತಾರಾಗಣ: ರಿಷಿ, ಪ್ರಣೀತಾ ಸುಭಾಷ್, ಶುಭ್ರಅಯ್ಯಪ್ಪ, ಅರುಣ್ ಸಾಗರ್ ಇತರರು
ರೇಟಿಂಗ್: 3.5/5
ಆಧುನಿಕ ರಾಮನ ಆಲೋಚನೆಯನ್ನು ಹೊಂದಿದ ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿ ರಾಮನ ಅವತಾರ ಈ ವಾರ ತೆರೆಗೆ ಬಂದಿದೆ.
ನನ್ನ ಊರನ್ನು ಉದ್ದಾರ ಮಾಡಲು ಹೊರಡುವ ಆಧುನಿಕ ರಾಮನ ಬದುಕಿನಲ್ಲಿ ಎದುರಾಗುವ ಎಡವಟ್ಟುಗಳು, ಇವುಗಳ ನಡುವೆ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿದೆ. ಜನರ ಸೇವೆ, ಪ್ರೀತಿ ನಡುವೆ ಒದ್ದಾಡುವ ನಾಯಕನ ಪಾತ್ರ ಇಲ್ಲಿದೆ.
ಕನ್ನಡ ಊರಿನಲ್ಲಿ ಬದುಕು ಕಟ್ಟಿಕೊಳ್ಳಲು ದೃಢ ನಿರ್ಧಾರ ಮಾಡುವ ರಾಮನ ಪಾತ್ರಧಾರಿ ರಿಷಿ, ಅದೇ ಊರಿನ ಹುಡುಗಿ ಪೂರ್ಣಿ ಪಾತ್ರಧಾರಿ ಶುಭ್ರ ಅಯ್ಯಪ್ಪಳನ್ನು ಪ್ರೀತಿ ಮಾಡುತ್ತಾನೆ. ಆದರೆ ಅವಳು ರಾಮನನ್ನು ಇಷ್ಟಪಡುವ ವೇಳೆಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತೆಂದು ದೂರವಾಗುತ್ತಾಳೆ. ಈ ನೋವಿನಲ್ಲಿ ರಾಮ ಊರನ್ನು ಉದ್ಧಾರ ಮಾಡಲು ರಾಜಕೀಯಕ್ಕೆ ಇಳಿಯಲು ಬಯಸಿ ಹಣ ಸಂಗ್ರಹಿಸುವ ಕೆಲಸಕ್ಕೆ ಮುಂದಾಗುತ್ತಾನೆ. ಆದರೆ ಸಂಗ್ರಹಿಸಿದ ಹಣ ಕಳವಾಗುತ್ತದೆ. ಆಗ ರಾಮ ಊರನ್ನು ಬಿಡುವ ಪರಿಸ್ಥಿತಿ ಎದುರಾಗುತ್ತದೆ.
ಕಳ್ಳರನ್ನು ಹುಡುಕಲು ಮುಂದಾಗುವ ವೇಳೆಗೆ ರೆಸಾರ್ಟ್ ನಲ್ಲಿ ರಿಪೋರ್ಟರ್ ಪ್ರಣೀತಾ ಸುಭಾಷ್ ಪರಿಚಯ ಆಗುತ್ತದೆ. ಅವಳ ಪರಿಚಯ ಆಗುವ ವೇಳೆಗೆ ಮುಂದೆ ಕಿಡ್ನಾಪ್ ಆಗುತ್ತದೆ. ಈ ನಡುವೆ ಡ್ರಗ್ಸ್, ಹೆಣ್ಣು ಮಕ್ಕಳ ಮಾರಾಟ ದಂಧೆ ಮಾಡುವ ಗ್ಯಾಂಗ್ ಸ್ಟರ್ ಅಲೆಕ್ಸಾಂಡರ್ ಪಾತ್ರಧಾರಿ ಅರುಣ್ ಸಾಗರ್ ಎಂಟ್ರಿ ಆಗುತ್ತದೆ.
ಮುಂದೆ ಎಲ್ಲಾ ವಿಷಯಗಳು ಒಟ್ಟಿಗೆ ಸೇರಿಕೊಂಡು ಕ್ಲೈಮ್ಯಾಕ್ಸ್ ಹಂತಕ್ಕೆ ಬರುತ್ತದೆ. ರಾಮನ ರಾಜಕೀಯ ಭವಿಷ್ಯ ಏನಾಗುತ್ತದೆ? ರಿಪೋರ್ಟರ್ ಕಿಡ್ನಾಪ್ ಮಾಡಿದ್ದು ಯಾರು? ರಾಮನಿಗೆ ಪ್ರೀತಿ ಸಿಗುತ್ತದಾ? ಎಲ್ಲದಕ್ಕೂ ಚಿತ್ರವನ್ನು ನೋಡಬೇಕು.
ನಿರ್ದೇಶಕರು ಚಿತ್ರದ ಮೂಲಕ ಆಧುನಿಕ ರಾಮನ ಆಲೋಚನೆಗೆ ಪೂರಕವಾದ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕಥೆ ಸ್ವಲ್ಪ ಉತ್ತಮವಾಗಿ ಮೂಡಿ ಬರುತ್ತಿದ್ದಲ್ಲಿ ಪ್ರೇಕ್ಷಕರಿಗೆ ಇನ್ನಷ್ಟು ಮರಂಜನೆ ಸಿಗುತ್ತಿತ್ತು.
ನಾಯಕನ ಪಾತ್ರದಲ್ಲಿ ರಿಷಿ ಉತ್ತಮವಾಗಿ ನಟಿಸಿದ್ದಾರೆ. ಪ್ರಣಿತ ಸುಭಾಷ್ ಮುದ್ದಾಗಿ ಕಾಣಿಸುತ್ತಾರೆ. ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರುಣ್ ಸಾಗರ್ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಪ್ರದರ್ಶನ ಮಾಡಿದ್ದಾರೆ.
ಜೂಡ್ ಸ್ಯಾಂಡಿ ಹಿನ್ನೆಲೆ ಸಂಗೀತ ಚೆನ್ನಾಗಿದೆ. ವಿಷ್ಣು ಪ್ರಸಾದ್ ಹಾಗೂ ಸಮೀರ್ ದೇಶ್ಪಾಂಡೆ ಅವರ ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತದೆ.
ಮನರಂಜನಾತ್ಮಕ ಚಿತ್ರವಾಗಿ ರಾಮನ ಅವತಾರ ಓಕೆ ಅನಿಸುತ್ತದೆ.
____
Be the first to comment