ಇದು ಕನ್ನಡ ಚಿತ್ರರಂಗದ ಸಮಗ್ರ ಅಭಿವೃದ್ಧಿ, ನಿರ್ಮಾಪಕರ, ವಿತರಕರ, ಪ್ರದರ್ಶಕರ, ತಂತ್ರಜ್ಞರ, ಕಾರ್ಮಿಕರ ಹಾಗೂ ಕಲಾವಿದರ ಇಂದಿನ-ಮುಂದಿನ ಹಿತವನ್ನು ಕಾಯುವ ನಿಟ್ಟಿನಲ್ಲಿ ಉದ್ಘಾಟನೆ ಆಗುತ್ತಿದೆ. ಇದು ಲಯನ್ ವೆಂಕಟೇಶ್ ಅವರ ಉಸ್ತುವಾರಿಯಲ್ಲಿ ಕನ್ನಡ ಕಲೆ, ಸಂಸ್ಕೃತಿ, ಸಿನಿಮಾ ಟ್ರಸ್ಟ್, ಅಖಂಡ ಕರ್ನಾಟಕ ಚಿತ್ರೋದ್ಯಮ ಪರಿಷತ್ ವಿತರಣಾ ಸಂಸ್ಥೆ, ಅಖಂಡ ಕರ್ನಾಟಕ ಚಿತ್ರೋದ್ಯಮ ಪರಿಷತ್ ಸೌಹಾರ್ದ ಸಹಕಾರಿ, ಅಖಂಡ ಕರ್ನಾಟಕ ಚಿತ್ರೋದ್ಯಮ ಪರಿಷತ್ ಹೌಸಿಂಗ್ ಸೊಸೈಟಿ, ಕಲರ್ಫುಲ್ ಕನ್ನಡ ವೆಬ್ ಚಾನಲ್ ಹೀಗೆ ಹಲವು ಬಗೆಯ ಕಾರ್ಯಗಳನ್ನು ನಿರ್ವಹಿಸುವ ಗುರಿ ಹೊಂದಿದೆ.
ಇನ್ನು ಈಗಾಗಲೇ 80 ವರ್ಷದ ‘ಚಲನಚಿತ್ರ ವಾಣಿಜ್ಯ ಮಂಡಳಿ’ ಸಂಸ್ಥೆ ಎಸ್.ಎ.ಚಿನ್ನೇಗೌಡರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಅಲ್ಲದೆ ಕೃಷ್ಣೆಗೌಡ ಅವರ ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ ಕೆಲಸ ಮಾಡುತ್ತಿದೆ.
Be the first to comment