ಹೊಸಬರ ‘ರಂಗಸ್ಥಳ’ ಚಿತ್ರದೊಂದಿಗೆ ಮಲಯಾಳಂನ ಖ್ಯಾತ ನಟ ಮನೋಜ್ ಕೆ ಜಯನ್ ಖಳನಾಯಕನಾಗಿ ಸ್ಯಾಂಡಲ್ವುಡ್ ಗೆ ಮತ್ತೆ ಬಂದಿದ್ದಾರೆ.
2005ರಲ್ಲಿ ಕನ್ನಡದ ಉಗ್ರ ನರಸಿಂಹ ಚಿತ್ರದಲ್ಲಿ ನಟಿಸಿದ ಮನೋಜ್ ಕೆ ಜಯನ್, ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ರೇವಣ್ಣ ಅಘೋರ ಮೋಶನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಈಶ್ವರ್ ನಿತಿನ್ ಆಕ್ಷನ್ ಕಟ್ ಹೇಳಲಿದ್ದಾರೆ. ಗಿರ್ಕಿ ಚಿತ್ರದಲ್ಲಿ ನಟಿಸಿದ ವಿಲೋಕ್ ರಾಜ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿಲ್ಪ ಕಾಮತ್ ನಾಯಕಿಯಾಗಿದ್ದಾರೆ. ಇದೊಂದು ಗ್ರಾಮೀಣ ಭಾಗದ ಸೊಗಡನ್ನು ತೋರಿಸುವ ಕಥೆಯಾಗಿದೆ.
”ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರಧಾರಿಅವರದ್ದೆ ಆದ ಒಂದು ಚಿಂತನೆ ಹಾಗೂ ಮನಸ್ಥಿತಿಯನ್ನು ಹೊಂದಿದ್ದು, ಅವರು ಯಾವ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ? ರಂಗಸ್ಥಳದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವ ಕುರಿತು ಈ ಚಿತ್ರ ತೋರಿಸಿ ಕೊಡುತ್ತದೆ ಎಂದು ನಿರ್ದೇಶಕ ಈಶ್ವರ್ ನಿತಿನ್ ತಿಳಿಸಿದ್ದಾರೆ.
ರಂಗಸ್ಥಳ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಹೆಚ್ಚಾಗಿ ಹೊಸಬರಿಗೆ ಅವಕಾಶ ಕೊಡಲಾಗಿದೆ. ರಂಗಸ್ಥಳ ಎಂದರೆ ಒಂದು ವೇದಿಕೆ, ರಂಗ ಕಲೆಗಳ ಪ್ರದರ್ಶನ ನಡೆಯುವ ಒಂದು ಸ್ಥಳ. ಪುತ್ತೂರು, ಸುಳ್ಯ ಭಾಗದ ಭಾಷೆ, ಆಚಾರ ವಿಚಾರ, ಕಲೆ, ಆ ಭಾಗದ ಸೊಗಡನ್ನ ಸಿನಿಮಾದಲ್ಲಿ ತೋರಿಸುವ ಕಥೆ ಇದೆ.
Be the first to comment