ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ‘ಕಾಂತಾರ 1’ ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆ ಆರಂಭವಾಗಿದೆ.
ಈ ವಾರ ಪೂರ್ಣ ಪ್ರಮಾಣದ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಹಂತದ ಚಿತ್ರೀಕರಣ 20 ದಿನಗಳ ಕಾಲ ನಡೆಯಲಿದೆ. ನಿರ್ಮಾಣ ತಂಡ ತಾತ್ಕಾಲಿಕವಾಗಿ ಕುಂದಾಪುರದಲ್ಲಿ ಬಿಡಾರ ಹೂಡಿದೆ. ಹೊರಾಂಗಣ ದೃಶ್ಯಗಳನ್ನು ಕಾಡಿನಲ್ಲಿ ಚಿತ್ರೀಕರಿಸಲಾಗುತ್ತಿದ್ದರೂ, ಕುಂದಾಪುರದ ಸುಂದರವಾದ ಕರಾವಳಿಯ ಸನ್ನಿವೇಶದಲ್ಲಿ ಒಳಾಂಗಣ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.
ಕಾಂತಾರ ಅಧ್ಯಾಯ 1, 2022ರಲ್ಲಿ ತೆರೆಗೆ ಬಂದ ಹಿಟ್ ಚಲನಚಿತ್ರ ಕಾಂತಾರದ ಮುಂದುವರಿದ ಭಾಗವಾಗಿದೆ. ದೊಡ್ಡ-ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಕುಂದಾಪುರದಲ್ಲಿ ಬೃಹತ್ ಸೆಟ್ ನ್ನು ಹಾಕಲಾಗಿದೆ. ಇದು ರಾಮೋಜಿ ಫಿಲ್ಮ್ ಸಿಟಿಯ ನಂತರದ ಅತಿದೊಡ್ಡ ಸೆಟ್‌ಗಳಲ್ಲಿ ಒಂದಾಗಿದೆ. ಸೆಟ್ 200×200 ಅಡಿ ಒಳಾಂಗಣ ಸೆಟ್ ಹವಾನಿಯಂತ್ರಣ, ಡಬ್ಬಿಂಗ್ ಸ್ಟುಡಿಯೋ ಮತ್ತು ಎಡಿಟಿಂಗ್ ಸೂಟ್ ನ್ನು ಒಳಗೊಂಡು ಅದ್ಭುತವಾಗಿದೆ. ಚಿತ್ರ ನಿರ್ಮಾಣಕ್ಕೆ ಬೇಕಾಗುವ ಎಲ್ಲವೂ ಲಭ್ಯವಾಗುತ್ತಿದೆ.
ಪ್ರಸ್ತುತ 600 ಬಡಗಿಗಳನ್ನು ಮತ್ತು ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನ ತಂತ್ರಜ್ಞರು ಕುಂದಾಪುರಕ್ಕೆ ಸ್ಥಳಾಂತರಗೊಂಡಿದ್ದಾರೆ. ಸ್ಟಂಟ್ ಮಾಸ್ಟರ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ನಟರು ಕಲರಿಪಯಟ್ಟು ಮತ್ತು ಕುದುರೆ ಸವಾರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
‘ಕಾಂತಾರ 1 ‘ಕ್ಕೆ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಸ್ಕ್ರಿಪ್ಟ್ ಬರೆದಿದ್ದಾರೆ. ಬರಹಗಾರರಾದ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಸ್ಕ್ರಿಪ್ಟ್‌ಗೆ ಕೊಡುಗೆ ನೀಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.
ಮೂಲ ಕಾಂತಾರದ ಕೆಲವು ನಟರು ಮುಂದುವರಿದ ಭಾಗದಲ್ಲಿ ಕೂಡ ಇರಲಿದ್ದು, ಪೂರ್ಣ ಪಾತ್ರವರ್ಗವನ್ನು ಅಧಿಕೃತವಾಗಿ ತಂಡ ಘೋಷಿಸಬೇಕಾಗಿದೆ.
Be the first to comment