ರಕ್ಷಿತ್ ಶೆಟ್ಟಿ ತಮ್ಮ ನಿರ್ದೇಶನದ ‘ರಿಚರ್ಡ್ ಆಂಟನಿ’ ಚಿತ್ರವನ್ನು ಸಂಪೂರ್ಣವಾಗಿ ಪಶ್ಚಿಮ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲು ಯೋಜಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ‘ರಿಚರ್ಡ್ ಆಂಟನಿ’ ಚಿತ್ರವನ್ನು ಉಡುಪಿಯಲ್ಲಿ ಮಾತ್ರ ಚಿತ್ರೀಕರಣ ಮಾಡುವ ಯೋಜನೆ ನನಗಿಲ್ಲ. ಪಶ್ಚಿಮ ಘಟ್ಟಗಳಲ್ಲಿರುವ ಕೇರಳ ಮತ್ತು ಗೋಕರ್ಣದಂತಹ ಇತರ ಪ್ರದೇಶಗಳನ್ನು ಅನ್ವೇಷಿಸಬೇಕಾಗಿದೆ” ಎಂದಿದ್ದಾರೆ.
“ರಿಚರ್ಡ್ ಆಂಟನಿಯಲ್ಲಿ ಕೆಲಸ ಮಾಡುವ ಕಲಾವಿದರು ಉಡುಪಿಯ ಆಡುಭಾಷೆ ಮತ್ತು ಕನ್ನಡದ ಕಂಪು ಹೊಂದಿರುವುದು ಅತ್ಯಗತ್ಯ. ನಮ್ಮಲ್ಲಿ ಬೆಂಗಳೂರಿನ ಕೆಲವು ಉತ್ತಮ ಕಲಾವಿದರಿದ್ದಾರೆ. ಅವರು ಪಾತ್ರಗಳಿಗಾಗಿ ಸಂಪರ್ಕಿಸಿದ್ದಾರೆ. ಆದರೆ ನಾನು ಅವರನ್ನು ಯೋಜನೆಗೆ ಪರಿಗಣಿಸಲು ಸಾಧ್ಯವಿಲ್ಲ. ನಾನು ಬೇರೆ ಕಲಾವಿದರನ್ನು ಕರೆ ತರಲು ಪ್ರಯತ್ನಿಸಿದರೂ ಅದು ಅನುಕರಣೆಯಂತೆ ಕಾಣುತ್ತದೆ. ಹಾಗಾಗಿ ಕರಾವಳಿ ಭಾಗದಲ್ಲಿ ಚಿತ್ರೀಕರಣದ ಹೊರತಾಗಿ ರಿಚರ್ಡ್ ಆಂಟನಿಗಾಗಿ ಪ್ರತಿಯೊಬ್ಬ ನಟರೂ ಸಹ ಆ ಪ್ರದೇಶದವರೇ ಆಗಿರುತ್ತಾರೆ” ಎಂದರು.
ಸ್ಕ್ರಿಪ್ಟ್ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಿದೆ. ರಕ್ಷಿತ್ ಸದ್ಯ ಕ್ಲೈಮ್ಯಾಕ್ಸ್ ಭಾಗಗಳನ್ನು ಬರೆಯುತ್ತಿದ್ದಾರೆ. ಚಿತ್ರಕಥೆಯನ್ನು ಪೂರ್ಣಗೊಳಿಸಿದ ನಂತರ ಹೊಂಬಾಳೆ ಫಿಲ್ಮ್ಸ್ನ ನಿರ್ಮಾಪಕ ವಿಜಯ್ ಕಿರಗಂದೂರು ಅವರೊಂದಿಗೆ ನಿರ್ಮಾಣ ಯೋಜನೆಗಳನ್ನು ಚರ್ಚಿಸುವ ನಿರೀಕ್ಷೆಯಿದೆ.
‘ನಾನು ಸ್ಕ್ರಿಪ್ಟ್, ಪ್ರಿ-ಪ್ರೊಡಕ್ಷನ್ನೊಂದಿಗೆ ಸಿದ್ಧನಾಗಿದ್ದೇನೆ. ಶೀಘ್ರದಲ್ಲೇ ಚಿತ್ರ ಸೆಟ್ಟೇರಲು ಕೆಲಸ ಮಾಡಲಾಗುತ್ತಿದೆ’ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
Be the first to comment