ಆಂಧ್ರಪ್ರದೇಶದಿಂದ ಬಂದು ಕನ್ನಡದಲ್ಲಿ ಒಂದು ಚಿತ್ರ ಮಾಡಿದ್ದಾರೆ ಎಂದು ತಿಳಿದು ಖುಷಿಯಾಯಿತು. ಟ್ರೇಲರ್ ನೋಡಿದೆ, ಚೆನ್ನಾಗಿದೆ. ಚಿತ್ರತಂಡಕ್ಕೆ ಶುಭಾಶಯಗಳು ಎಂದರು ಚಿನ್ನೇಗೌಡರು. ಅವರು ‘ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.ನಿರ್ದೇಶಕ ಶ್ರೀನಾಗ್ ಮಾತನಾಡಿ ‘ಇದು ಫೀಲ್ ಗುಡ್ ಲವ್ ಸ್ಟೋರಿ.ಅದರಲ್ಲಿ ಸಡನ್ ಆಗಿ ಬರುವ ಟ್ವಿಸ್ಟ್ ಗಳು ಚಿತ್ರದ ವಿಶೇಷತೆ. ಚಿತ್ರದಲ್ಲಿ ನಾಯಕಿ ಮೂಗಿ ಮತ್ತು ಕಿವುಡಿ ಆಗಿರುವುದರಿಂದ ಶೀರ್ಷಿಕೆ ಸೂಕ್ತವಾಗುತ್ತದೆ’ ಎಂದರು.
ಸಾನ್ವಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಬೊಲೇನಾಥ್ ಅವರು ಪ್ರವೀಣ್ ರಾಜ್ ಮತ್ತು ಸುರೇಶ್ ಜೊತೆಗೆ ಸೇರಿ ಚಿತ್ರ ನಿರ್ಮಿಸಿದ್ದಾರೆ. ಅದರ ಜೊತೆಯಲ್ಲೇ ವಿಜಯ್ ಅವರು ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ಈ ಹಿಂದೆ ಅವರು ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ಖಳನಾಗಿ ನಟಿಸಿದ್ದಾರೆ. ಮತ್ತೋರ್ವ ನಿರ್ಮಾಪಕ ಸುರೇಶ್ ಚಿತ್ರದ ಸಂಕಲಕಾರರೂ ಆಗಿರುವುದು ವಿಶೇಷ.ಚಿತ್ರಕ್ಕೆ ಒಟ್ಟು 40ದಿನಗಳ ಚಿತ್ರೀಕರಣ ನಡೆಸಲಾಗಿದ್ದು,ಉಡುಪಿ ಹೈದರಾಬಾದ್ ಸೇರಿದಂತೆ ಬೆಂಗಳೂರಲ್ಲಿಯೂ ಚಿತ್ರೀಕರಿಸಲಾಗಿದೆ.
ಮತ್ತೆ ಪೊಲೀಸ್ ಪಾತ್ರದಲ್ಲಿ ಅರವಿಂದ್ ‘ರಂಗಿತರಂಗ’ದ ಬಳಿಕ ಎಲ್ಲರೂ ಪೊಲೀಸ್ ಪಾತ್ರಕ್ಕೆ ಆಹ್ವಾನಿಸುತ್ತಿದ್ದಾರೆ. ನಾನು ಒಪ್ಪುವುದು ಕಡಿಮೆ. ಹೈದರಾಬಾದ್ ನಿಂದ ಬಂದ ತಂಡದವರೂ ಪೊಲೀಸ್ ಪಾತ್ರಕ್ಕೆ ಕರೆದರು. ಆದರೆ ಚಿತ್ರೀಕರಣ ಮುಂದುವರಿದ ಹಾಗೆ ನಾನು ಕೂಡ ಅದರಲ್ಲಿ ಇನ್ವಾಲ್ವ್ ಆಗಿ ಪಾತ್ರ ಮಾಡುವಂತಾಯಿತು.
ಕಿರಣ್ ವಾರಣಾಸಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅವರು ಕನ್ನಡದಲ್ಲಿ ತಮ್ಮ ಬಾಲ್ಯದಿಂದಲೇ ರಾಜನ್ ನಾಗೇಂದ್ರ ಮತ್ತು ಹಂಸಲೇಖ ಅವರ ಹಾಡುಗಳನ್ನು ಕೇಳಿ ಸ್ಫೂರ್ತಿ ಪಡೆದಿರುವುದಾಗಿ ತಿಳಿಸಿದರು. ಹಿನ್ನೆಲೆ ಸಂಗೀತ ತುಂಬ ಥ್ರಿಲ್ ಆಗಿದೆ.ಸಾಹಿತ್ಯ ಬರೆದಿರುವ ಕಂಚನ್ ಕೌಸ್ತುಭ್, ಸಂಭಾಷಣೆ ಬರೆದಿರುವ ಪ್ರವೀಣ್ ಸೂಡ ಮತ್ತು ಆನಂದ್ ಆಡಿಯೋ ಅನಿಲ್, ಉಪಸ್ಥಿತರಿದ್ದರು.
Pingback: roofing company Concord NH