ಚನ್ನಂಬಿಕಾ ಫಿಲಂಸ್ ಲಾಂಛನದಲ್ಲಿ ಅನಿತಾಕುಮಾರಸ್ವಾಮಿ ನಿರ್ಮಿಸಿ, ನಿಖಿಲ್ಕುಮಾರ್ ನಟಿಸಿರುವ ಸೀತಾರಾಮಕಲ್ಯಾಣ ಚಿತ್ರದ ಪತ್ರಿಕಾಗೋಷ್ಠಿಯ ನಡೆಯಿತು. ಚಿತ್ರದ ನಾಯಕ ನಿಖಿಲ್ಕುಮಾರ್, ನಾಯಕಿ ರಚಿತಾರಾಮ್ ಸೇರಿದಂತೆ ಹಲವು ಕಲಾವಿದರು ತಮಗೆ ಚಿತ್ರೀಕರಣದ ವೇಳೆ ಆದ ಅನುಭವಗಳನ್ನು ರಸವತ್ತಾಗಿ ವರ್ಣಿಸಿದರು.
ನಿಖಿಲ್ಕುಮಾರಸ್ವಾಮಿ ಮಾತನಾಡಿ, ಸೀತಾರಾಮ ಕಲ್ಯಾಣ ಚಿತ್ರವು ಜಾಗ್ವರ್ ರೀತಿಯ ಚಿತ್ರವಲ್ಲ, ಮನೆಮಂದಿಯೆಲ್ಲ ಕುಳಿತುಕೊಂಡು ನೋಡುವ ಸಾಂಸಾರಿಕ ಚಿತ್ರ, ನಿರ್ದೇಶಕ ಹರ್ಷ ಅವರು ಪ್ರತಿ ಕ್ಷಣವೂ ನನಗೆ ತುಂಬಾ ಸಹಕಾರ ನೀಡಿದ್ದರಿಂದ ಉತ್ತಮ ನಟನೆ ನೀಡಲು ಸಾಧ್ಯವಾಯಿತು, ಅವರೊಂದಿಗೆ ಮತ್ತೊಂದು ಚಿತ್ರವನ್ನು ಮಾಡುವ ಮನಸ್ಸಾಗಿದೆ, ಈ ಚಿತ್ರದ ಸಹನಿರ್ಮಾಪಕ ಸುನೀಲ್ ಅವರಿಗೂ ಧನ್ಯವಾದ ಹೇಳಲೇಬೇಕು. ತಮಗೆ ಸರಿಕಾಣದ್ದನ್ನು ನೇರವಾಗಿ ಹೇಳಿಬಿಡುತ್ತಿದ್ದರು. ಒಂದು ಉತ್ತಮ ಚಿತ್ರ ಮಾಡಿದ ತೃಪ್ತಿ ಈ ಚಿತ್ರದಿಂದ ಸಿಕ್ಕಿದೆ ಎಂದರು.
ನನ್ನ ಶರತ್ ಅವರ ಕಾಂಬಿನೇಶನ್ ಸೀನ್ಗಳನ್ನು ನೋಡಿದಾಗ ನನ್ನ ತಂದೆ ನೆನಪಾದರು. ಆದಿತ್ಯ ಮೆನನ್ ಜಾಗ್ವಾರ್ನಲ್ಲಿ ವಿಲನ್ ಆಗಿದ್ರು. ಈ ಚಿತ್ರದಲ್ಲಿ ಬೇರೆಯದೇ ಪಾತ್ರ ಮಾಡಿದ್ದಾರೆ. ಹರ್ಷ ನನಗೆ ತುಂಬಾ ಹೇಳಿಕೊಟ್ಟರು, ಈ ಚಿತ್ರದಲ್ಲಿ ನಾನೇನಾದರೂ ಮಾಡಿದ್ದೇನೆಂದರೆ ಅದಕ್ಕೆ ಹರ್ಷ ಅವರೇ ಕಾರಣ. ಈ ಸಿನಿಮಾ ಆರಂಭವಾದಾಗಿನಿಂದಲೂ ಒಂದು ಮಾತು ಕೇಳಿಬರುತ್ತಲೇ ಇತ್ತು. ಅದು ರೀಮೇಕ್ ಸಿನಿಮಾ ಎಂಬುದು. ಇದು ರೀಮೇಕ್ ಅಲ್ಲ, ಖಂಡಿತ ಸ್ವಮೇಕ್ ಸಿನಿಮಾ ಎಂದರು. ಮೈನೆ ಪ್ಯಾರ್ಕಿಯಾ, ಅಮ್ಮಾವ್ರ ಗಂಡ ಚಿತ್ರದ ನಾಯಕಿ ಭಾಗ್ಯಶ್ರೀ ತಮ್ಮ ಚಿತ್ರದ ಬಗ್ಗೆ ಹೆಚ್ಚು ಮಾತನಾಡದಿದ್ದರೂ, ಅಣ್ಣಯ್ಯನ ಬೆಡಗಿ ಮಧುಬಾಲಾ ಮಾತನಾಡಿ, ನಾನು ಮತ್ತು ಭಾಗ್ಯಶ್ರೀ ಕಾಲೇಜ್ ಫ್ರೆಂಡ್ಸ್ ಆಗಿದ್ದೆವು ಎಂದು ಹೇಳುತ್ತಿದ್ದಂತೆ ಭಾಗ್ಯಶ್ರೀ ಅವರ ಮಾತಿಗೆ ಬ್ರೇಕ್ ಹಾಕಿದರು.
ಶರತ್ಕುಮಾರ್, ಗಿರಿಜಾಲೋಕೇಶ್, ಆದಿತ್ಯಮೆನನ್, ಲಹರಿವೇಲು ಅವರೂ ಮಾತನಾಡಿದರು. ನಿರ್ದೇಶಕ ಹರ್ಷ ಮಾತನಾಡಿ, ಇದೊಂದು ಭರ್ಜರಿ ಸಿನಿಮಾ. ಮೂರು ಚಿತ್ರಕ್ಕೆ ಹಾಕಿದ ಶ್ರಮವನ್ನು ನಾನು ಈ ಒಂದೇ ಚಿತ್ರಕ್ಕೆ ಹಾಕಿದ್ದೇನೆ, ಚಿತ್ರಕ್ಕಾಗಿ 130 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ, ಈ ಸಿನಿಮಾದ ಕ್ಲೈಮ್ಯಾಕ್ಸ್ ಅವಧಿ 37 ನಿಮಿಷ. ಈ ಸೀನ್ನಲ್ಲಿ ಚಿತ್ರದಲ್ಲಿ ನಟಿಸಿರುವ ಎಲ್ಲಾ 40 ಕಲಾವಿದರು ಅಭಿನಯಿಸಿದ್ದಾರೆ. ಇಂತಹ ದೃಶ್ಯಗಳನ್ನು ನಿರ್ದೇಶಿಸುವುದು ಛಾಲೆಂಜ್. 50 ಜನ ಡ್ಯಾನ್ಸರ್ಗಳಿಂದ ನೃತ್ಯ ಮಾಡಿಸುವುದಕ್ಕಿಂತ ಈ ಒಂದು ದೃಶ್ಯವನ್ನು ನಿರ್ದೇಶಿಸುವುದು ಸವಾಲೇ ಸರಿ. ಚಿತ್ರಕ್ಕೆ ರಾಮ್ಲಕ್ಷ್ಮಣ್ ಅವರು ಮೈನವಿರೇಳಿಸುವಂತಹ ಫೈಟ್ಸ್ ನೀಡಿದ್ದಾರೆ ಎಂದರು.
ಇನ್ನು ಈ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸï ಹಾಗೂ ಕನ್ನಡ ಸ್ಯಾಟ್ಲೈಟ್ ರೈಟ್ಸ್ ಕೂಡ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಹಾಕಿದ ಬಂಡವಾಳದಲ್ಲಿ ಬಹುತೇಕ ವಾಪಾಸ್ ಆಗಿದೆ ಎಂದು ಕೂಡ ನಿರ್ದೇಶಕ ಹರ್ಷ ಹೇಳಿದರು. ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚನ್ನಾಂಬಿಕಾ ಫಿಲಂಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನಿಲ್ ಹಾಗೂ ಆಡಿಯೋ ಖರೀದಿಸಿದ ಲಹರಿ ಸಂಸ್ಥೆಯ ವೇಲು ಕೂಡ ಸಮಾರಂಭದಲ್ಲಿ ಹಾಜರಿದ್ದರು.
Pingback: fake richard mille