ಕ್ಷೇತ್ರದ ಜನರ ಪೋನ್ ಕಾಲ್ ನ ಖುದ್ದು ನಾನೇ ರಿಸೀವ್ ಮಾಡ್ತೀನಿ
“ಜನ ನಾಯಕರಾಗಿ ಆಯ್ಕೆಯಾಗುವ ನಾವು ಜನರ ಸ್ಪಂದನೆಗೆ ಸಿಗಬೇಕು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮ ಆದ್ಯತೆಯಾಗಿರಬೇಕು ನಾನು ಜನರ ಕೈಗೆ ಸಿಗಬಲ್ಲ ನಾಯಕ” ಹೀಗೆಂದು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಕಣಕ್ಕಿಳಿದಿರುವ ಅವರು ಈ ಬಾರಿಯೂ ಬಹುಮತದಿಂದ ಗೆಲ್ಲುವುದಾಗಿ ಹೇಳಿದ್ದಾರೆ. ಅಲ್ಲದೇ, ರಾಜಕೀಯ ಆದ್ಯತೆಗಳನ್ನು ಲೆಕ್ಕಿಸದೆ ಜನರೊಂದಿಗೆ ಇರುವ ನನ್ನನ್ನು ಜನರು ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಕ್ಷೇತ್ರದ ಜನರು ನನಗೆ ಕರೆ ಮಾಡಿದರೆ, ಫೋನ್ ಕರೆಗಳನ್ನು ಖುದ್ದು ನಾನೇ ಸ್ವೀಕರಿಸುತ್ತೇನೆ. ಜನರೊಂದಿಗೆ ವೈಯಕ್ತಿಕ ಬಾಂಧವ್ಯ ಇಟ್ಟುಕೊಂಡಿರುವ ನಾನು, ನನ್ನ ಕ್ಷೇತ್ರದ ವಿವಿಧ ವರ್ಗದ ಜನರ ಬದುಕನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವನ್ನು ನಿರ್ಧರಿಸಲಿವೆ. ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲೂ ಪಿ.ಸಿ ಮೋಹನ್ ಅವರ ಅಬ್ಬರ ಹೆಚ್ಚಿದ್ದು, ಈ ಬಾರಿಯೂ ಜನ ಅವರಿಗೇ ಮಣೆಹಾಕಲಿರುವುದು ಬಹುತೇಕ ಖಚಿತವಾಗಿದೆ.
15 ವರ್ಷಗಳ ನಿರಂತರ ಅಭಿವೃದ್ಧಿಯೇ ಗೆಲುವಿನ ಬಲ
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದನಾಗಿ ಮೂರು ಬಾರಿ ಆಯ್ಕೆಗೊಂಡು ನಾಲ್ಕನೇ ಬಾರಿಗೆ ಗೆಲುವು ಬಯಸಿರುವ ನನಗೆ ಇದುವರೆಗಿನ 15 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಬಲ. ಸತತ ಮೂರು ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾಗಿರುವ ನಾನು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಸಂಖ್ಯಾತ ಹಾಗೂ ಆಪ್ಯಾಯಮಾನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಹೇಳಿದ್ದಾರೆ.
ಬೆಂಗಳೂರಿನ ಐಟಿ ಹಬ್ ಗಳು ನನ್ನ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿವೆ. ಇಲ್ಲಿಗೆ ಬರುವ ಕಂಪನಿಗಳಿಗೆ ಅಗತ್ಯ ಮೂಲಸೌಕರ್ಯಗಳು ದೊರೆಯುವಂತೆ ಮಾಡಿದ್ದೇನೆ. ಅದೇ ರೀತಿ ಇಂಥ ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸಲು ಬಂದಿರುವ ದೇಶಾದ್ಯಂತದ ಜನರ ವಾಸಕ್ಕೆ ಯೋಗ್ಯ ಸ್ಥಳಗಳನ್ನು ನಿರ್ಮಿಸಿಕೊಡಲಾಗಿದೆ. ಅಂಥ ಕಡೆಗಳಲ್ಲಿ ರಸ್ತೆ, ನೀರು ಸೇರಿದಂತೆ ಎಲ್ಲ ಬಗೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ನನ್ನ ಶ್ರಮವಿದೆ. ಇಂಥ ಕೆಲಸಗಳು ನನ್ನ ಕೈ ಹಿಡಿಯಲಿವೆ ಎಂದು ಸಂಸದ ಪಿ.ಸಿ ಮೋಹನ್ ಅವರು ಹೇಳಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳಿಗೆ, ವ್ಯಾಪಾರಿಗಳೊಂದಿಗೆ, ಉದ್ದಿಮೆಗಳೊಂದಿಗೆ, ನಾಗರಿಕ ಒಕ್ಕೂಟಗಳೊಂದಿಗೆ, ನಿವಾಸಿಗಳ ಸಂಘಗಳ ಜತೆ ನಿಕಟ ಸಂಪರ್ಕವನ್ನು ನಾನು ಹೊಂದಿದ್ದೇವೆ. ಪ್ರತಿಯೊಬ್ಬರ ಆಶೋತ್ತರಗಳನ್ನು ಈಡೇರಿಸಿದ್ದೇನೆ. ಅವರೆಲ್ಲರೂ ನನ್ನ ಗೆಲುವಿಗೆ ಬೆಂಬಲಿಸಲಿದ್ದಾರೆ. ಅವರು ನಿರೀಕ್ಷೆ ಮಾಡುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದೇನೆ ಎಂದು ಪಿಸಿ ಮೋಹನ್ ಅವರು ಹೇಳಿದ್ದಾರೆ.ಸದ್ಯ ಬೆಂಗಳೂರು ಸೆಂಟ್ರಲ್ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿರೋ ಪಿಸಿ ಮೋಹನ್ ಅಲೆ ದೊಡ್ಡದಾಗಿದೆ. ಬಿಜೆಪಿ ಮತ್ತು ಮೋದಿ ಕ್ರೇಜ್ ಜೋರಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸಂದರಾಗಿ ಪಿಸಿ ಮೋಹನ್ ರವರು ಮಾಡಿರೋ ಅಭಿವೃದ್ಧಿ ಕೆಲಸಗಳ ಮಾತನಾಡ್ತಿದ್ದು, 2024ರ ಲೋಕಸಭಾ ಚುನಾವಣೆಯಲ್ಲೂ ಭರ್ಜರಿ ಗೆಲುವಿನೊಂದಿಗೆ ಲೋಕಸಭೆಗೆ ಪ್ರವೇಶಿಸಿರೋ ಸನ್ನಾಹದಲ್ಲಿದ್ದಾರೆ.
Be the first to comment