ಸ್ಯಾಂಡಲ್‍ವುಡ್‍ಗೆ ಇತ್ತೀಚೆಗೆ ಹಾರರ್ ಸಿನಿಮಾಗಳು ಬರುತ್ತಿದ್ದು ಅವುಗಳಲ್ಲಿನ ದೆವ್ವಗಳು ನಾನಾ ರೀತಿಯಲ್ಲಿ ಕಾಟ ಕೊಟ್ಟಿರುವುದು ಪ್ರೇಕ್ಷಕರು ನೋಡಿದ್ದರೂ ಕೂಡ ಫ್ರೆಂಡ್ಲಿಬೇಬಿ ಚಿತ್ರದಲ್ಲಿ ದೆವ್ವ ವಿಭಿನ್ನ ರೀತಿಯ ಕಾಟವನ್ನು ಕೊಡುವ ಕಥೆಯನ್ನು ಹೆಣೆದಿದ್ದಾರಂತೆ ನಿರ್ದೇಶಕ ಮುತ್ತುಕುಮಾರ್. ದೇಶದಲ್ಲಿ ಹಣದ ಅಮಾನೀಕರಣ ಮತ್ತು ಅದು ಎಬ್ಬಿಸಿದ ರಾಜಕೀಯ ಸಂಚಲನವನ್ನು ಕೇಂದ್ರವಾಗಿಟ್ಟು ನಿರ್ಮಿಸಿರುವ ಚಿತ್ರವೇ ಫ್ರೆಂಡ್ಲಿ ಬೇಬಿ. ಈ ಬೇಬಿ ಕೆಲವರಿಗೆ ಮಿತ್ರನಂತಿದ್ದರೆ, ಇನ್ನೂ ಕೆಲವರಿಗೆ ತೊಂದರೆ ಕೊಡುವ ದೆವ್ವವಾಗಿ ಹೇಗೆ ಪರಿಣಮಿಸಿತ್ತು ಎಂಬುದನ್ನು ಈ ವಾರ ರಾಜ್ಯಾದಾದ್ಯಂತ ಚಿತ್ರಮಂದಿರಗಳಲ್ಲಿ ತೋರಿಸಲು ಹೊರಟಿದ್ದಾರೆ.
ಡಿ.ವೆಂಕಟೇಶರೆಡ್ಡಿ ಹಾಗೂ ಸುಂದರಂ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುಂದರಂ ಅವರ ಪುತ್ರ ಅರ್ಜುನ್ ಸುಂದರಂ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾನೆ. ನಾಯಕ ಅರ್ಜುನ್ ಮಾತನಾಡಿ, ಸರ್ಕಲ್ ರೌಡಿ, ಜಿಗರ್‍ಥಂಡಾ ಚಿತ್ರದಲ್ಲಿ ನಟಿಸಿದ್ದ ಫುಟ್‍ಬಾಲ್ ಪ್ಲೇಯರ್ ಆಗಿರುವ ಅರ್ಜುನ್ ಈ ಚಿತ್ರದ ಮೂಲಕ ಆ್ಯಕ್ಷನ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಎಂಬಿಎ ಮುಗಿಸಿರುವ ಅರ್ಜುನ್‍ಗೆ ಚಿಕ್ಕಂದಿನಿಂದಲೂ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆಯಿತ್ತು, ಮನೆಯವರ ಸಲಹೆಯಂತೆ ಸ್ಟಡಿ ಮುಗಿಸಿ ಡ್ಯಾನ್ಸ್, ಫೈಟ್ಸ್ ಎಲ್ಲಾ ಕಲಿತುಕೊಂಡು ಈಗ ಚಿತ್ರರಂಗಕ್ಕೆ ಬಂದಿದ್ದಾರೆ.
ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಜ್ಯೋತಿ ನಟಿಸಿದ್ದಾರೆ. ಸತ್ಯಂ ಶಿವಂ, ನಾನಿನ್ನ ಬಿಡಲಾರೆ ಸೇರಿ 4 ಧಾರಾವಾಹಿಗಳಲ್ಲಿ ಲೀಡ್ ರೋಲ್ ಮಾಡಿದ್ದಾರೆ. ಈ ಚಿತ್ರದಲ್ಲಿ ಮಾಡ್ರನ್ ಐಟಿ ವರ್ಕರ್ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕನಿಗೆ ಸಪೋರ್ಟ್ ಆಗಿರುವಂಥ ಪಾತ್ರ ಒಂದು ಹಾಡಿಗೆ ಡ್ಯಾನ್ಸ್ ಕೂಡ ಮಾಡಿರುವ ಜ್ಯೋತಿ ಅವರ ಪಾತ್ರ ಚಿತ್ರದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಮೂಲಕ ಎಂಟ್ರಿಯಾಗುತ್ತದೆ.
ಪತ್ರಕರ್ತ ಯತಿರಾಜ್ ಈ ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗುವ ಒಬ್ಬ ಕ್ವಾರಿ ಓನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಬೇಬಿ ಅಮೂಲ್ಯ ನಟಿಸಿದ್ದಾರೆ. ನನಗೆ ದೆವ್ವಗಳ ಸಿನಿಮಾ ಅಂದ್ರೆ ತುಂಬಾ ಇಷ್ಟ ಎಂದು ಹೇಳಿಕೊಂಡರು
Be the first to comment