ಮಾರ್ಚ್ 22ಕ್ಕೆ ‘ದಿಲ್ ಖುಷ್’ ಬಿಡುಗಡೆ

ಪ್ರಮೋದ್ ಜಯ ರಚಿಸಿ ನಿರ್ದೇಶಿಸಿರುವ ‘ದಿಲ್ ಖುಷ್’ ಸಿನಿಮಾ ಮಾರ್ಚ್ 22ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ.

‘ದಿಲ್ ಖುಷ್’ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.

ಜಯಪ್ರಭಾ ಕಲರ್ ಪ್ರೇಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಂಜಿತ್ ಮತ್ತು ಕಿರುತೆರೆ ನಟಿ ಸ್ಪಂದನ ಸೋಮಣ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಂಗಾಯಣ ರಘು, ಸೂರ್ಯ ಪ್ರವೀಣ್, ಅರುಣಾ ಬಾಲ್ರಾಜ್, ಧರ್ಮಣ್ಣ ಕಡೂರು, ರಾಘು ರಾಮನಕೊಪ್ಪ ಪಾತ್ರ ವರ್ಗದಲ್ಲಿದ್ದಾರೆ.

ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನೇಶ್ ಬಿ ಮಾತಾಡ್ ಸಂಕಲನ, ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!