ಸೂಪರ್ ಸ್ಟಾರ್ ರಜನಿಕಾಂತ್ 12 ಎಕರೆ ಜಾಗದಲ್ಲಿ ಬಡವರಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪುರೂರಿನಲ್ಲಿ ಸುಮಾರು 12 ಎಕರೆ ಜಾಗವನ್ನು ಖರೀದಿ ಮಾಡಿದ್ದು ಅಲ್ಲಿ ಆಸ್ಪತ್ರೆ ಕಟ್ಟಿಸಲು ರಜನಿಕಾಂತ್ ಮುಂದಾಗಿದ್ದಾರೆ.
ಚೆನ್ನೈ ಹಾಗೂ ತಿರುಪ್ಪುರೂರು ನಡುವೆ ಸುಮಾರು 45 ಕಿ.ಮೀ ಅಂತರವಿದ್ದು ಇಲ್ಲಿ ಜಮೀನು ಖರೀದಿಸಿದ್ದಾರೆ. ಈತ್ತೀಚೆಗೆ ರಜನಿ ಜಮೀನನ್ನು ನೋಂದಣಿ ಮಾಡಿಸಿದ್ದರು. ಅಲ್ಲಿಯೇ ಆಸ್ಪತ್ರೆ ಕಟ್ಟುತ್ತಾರೆ ಎಂದು ಹೇಳಲಾಗುತ್ತಿದೆ. ಜಾಗದ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬರಲಿಲ್ಲವಾದರೂ ಆಸ್ಪತ್ರೆ ಕಟ್ಟುವ ಉದ್ದೇಶಕ್ಕಾಗಿಯೇ ಈ ಜಮೀನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆಗಳು ಮುಗಿದಿದ್ದು ಯೋಜನೆ ಸಹ ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಆಸ್ಪತ್ರೆ ಬಡವರಿಗಾಗಿ ನಿರ್ಮಿಸಲಾಗುತ್ತಿದ್ದು, ಉಚಿತವಾಗಿ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ ಎನ್ನಲಾಗಿದೆ.
ರಜನಿಕಾಂತ್ ನಟನೆಯ ಜೊತೆಗೆ ತಮ್ಮ ಸರಳತೆಯ ಮೂಲಕ ಜನಗಳ ಮನಸ್ಸು ಗೆದ್ದಿದ್ದಾರೆ. ರಜನಿ ರಾಜಕೀಯ ಎಂಟ್ರಿಯ ಬಗ್ಗೆ ಅನೌನ್ಸ್ ಮಾಡಿದ್ದರು ಅನಾರೋಗ್ಯದ ಕಾರಣದಿಂದ ರಾಜಕೀಯದಿಂದ ದೂರ ಉಳಿದಿದ್ದಾರೆ. ಇದೀಗ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡದೆ ಬಡವರ ಸೇವೆಗೆ ಮುಂದಾಗಿದ್ದಾರೆ.
ರಜನಿಕಾಂತ್ ಈ ವರ್ಷ ತೆರೆಕಂಡ ಲಾಲ್ ಸಲಾಂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಡಿಜೆ ಜ್ಞಾನವೇಲ್ ನಿರ್ದೇಶನದ ‘ವೆಟ್ಟೈಯನ್’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
Be the first to comment