ಬೆಂಗಳೂರು ಚಲನಚಿತ್ರೋತ್ಸವ: 30 ಕನ್ನಡ ಚಿತ್ರ ಪ್ರದರ್ಶನ

ಫೆಬ್ರವರಿ 29 ರಿಂದ ಮಾರ್ಚ್ 7 ರವರೆಗೆ ನಡೆಯಲಿರುವ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರೋದ್ಯಮ 90ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆ  ಮತ್ತು ರಾಜ್ಯ ಕರ್ನಾಟಕ ಎಂದು ಮರುನಾಮಕರಣ ಮಾಡಿದ 50ನೇ ವರ್ಷಾಚರಣೆಯ ಭಾಗವಾಗಿ 30 ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವದಲ್ಲಿ ಸಂಘಟಕರು  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ, ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ, ಗಾಲೋ, ರಭ, ಸಂತಾಲಿ ಚಿತ್ರಗಳಿಗೂ ವೇದಿಕೆ ಒದಗಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಅವರು, ಆರಂಭಿಕ ಚಿತ್ರವಾಗಿ ಪೀಟರ್ ಲೂಸಿ ನಿರ್ದೇಶನದ  ‘ಬೋಂಜೂರ್ ಸ್ವಿಟ್ಸರ್ಲೆಂಡ್’ ಪ್ರದರ್ಶನವಾಗಲಿದೆ. ಕನ್ನಡ, ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳು, ಸಮಕಾಲೀನ ವಿಶ್ವ ಸಿನೆಮಾ, ದೇಶಕೇಂದ್ರಿ, ವಿಮರ್ಶಕರ ವಾರ, ಪುನರ್ವಲೋಕನ, ವಿಷಯಾಧಾರಿತ ಸಾಕ್ಷ್ಯಚಿತ್ರ ವಿಭಾಗ, ಜೀವನಚರಿತ್ರೆ, ಸ್ಮರಣೆ, ಗೌರವ, ಮಹಿಳಾ ಶಕ್ತಿ, ಹೀಗೆ ವಿವಿಧ ವಿಭಾಗಗಳಲ್ಲಿ 50 ಕ್ಕೂ ಹೆಚ್ಚು ದೇಶಗಳ 180 ಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನವಾಗಲಿವೆ ಎಂದು ತಿಳಿಸಿದ್ದಾರೆ.

ಏಷ್ಯನ್ ಸಿನಿಮಾ ಸ್ಪರ್ಧೆಗೆ ಅಂತಾರಾಷ್ಟ್ರೀಯ ತೀರ್ಪುಗಾರರು, ಭಾರತೀಯ ಸಿನಿಮಾ ಸ್ಪರ್ಧೆಗೆಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು,  ಕನ್ನಡ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಸೇರಿದಂತೆ ಚಿತ್ರೋತ್ಸವದಲ್ಲಿ ಐದು ತೀರ್ಪುಗಾರ ತಂಡಗಳಿರುತ್ತವೆ ಎಂದು ಅವರು ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!