ಮಾರ್ಚ್ 1ರಂದು ‘ಕ್ರೀಂ’ ಬಿಡುಗಡೆ

‘ಕಿರಿಕ್‌ ಪಾರ್ಟಿ’  ನಟಿ ಸಂಯುಕ್ತ ಹೆಗ್ಡೆ ನಟನೆಯ ‘ಕ್ರೀಂ’ ಚಿತ್ರ  ಮಾರ್ಚ್ 1ರಂದು ಬಿಡುಗಡೆಯಾಗಲಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಐದು ವರ್ಷಗಳ ಬಳಿಕ ಸಂಯುಕ್ತ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಆಕ್ಷನ್‌ ಸೀಕ್ವೆನ್ಸ್‌ನಲ್ಲೂ ಅವರು ಮಿಂಚಿದ್ದಾರೆ.

ಡಿ.ಕೆ.ದೇವೇಂದ್ರ ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಗ್ನಿ ಶ್ರೀಧರ್ ನಟಿಸಿದ್ದಾರೆ.

” ‘ಕ್ರೀಂ’ ಎಂದರೆ ಬೀಜಾಕ್ಷರ ಮಂತ್ರ. ಈ ಚಿತ್ರದ ಕಥೆ, ಹಣ ಹಾಗೂ ಅಧಿಕಾರಕ್ಕಾಗಿ ನಡೆಯುವ ಹೆಣ್ಣುಮಕ್ಕಳ ಬಲಿಯನ್ನು ಕುರಿತಾದ ಕಥಾಹಂದರ ಹೊಂದಿದೆ. ಹಲವೆಡೆ ಈ ರೀತಿಯ ಕೃತ್ಯಗಳು ನಡೆಯುತ್ತಲೇ ಇವೆ. ಇಂತಹ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ನನಗೆ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ. ನಟನೆಯಲ್ಲಿ ಆಸಕ್ತಿ ಇಲ್ಲ. ನಿರ್ಮಾಪಕರು ಹಾಗೂ ಹತ್ತಿರದವರ ಒತ್ತಾಯಕ್ಕೆ ನಟಿಸಿದೆ” ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.

ಅಚ್ಯುತ್‌ ಕುಮಾರ್‌, ಅರುಣ್‌ ಸಾಗರ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!