ಲೋಕಸಭಾ ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ನಟ ಡಾಲಿ ಧನಂಜಯ್ ಅವರು ಹೇಳಿದ್ದಾರೆ.
‘ಫೋಟೋ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಈ ಬಗ್ಗೆ ಮಾತನಾಡಿದ್ದಾರೆ.
”ಕಲಾವಿದರಾದ ನಾವು ಎಮೋಷನಲ್ ಆಗಿರುತ್ತೇವೆ. ಹಾಗಾಗಿ ಕೆಲವು ಬೆಳವಣಿಗೆಗಳಿಗೆ ರಿಯಾಕ್ಟ್ ಮಾಡಿರುತ್ತೇವೆ. ರಾಜಕಾರಣ ಬೇರೆ. ನಾಯಕನಾಗಿರುವುದು ಬೇರೆ. ಅದಕ್ಕೆ ಅದರದ್ದೇ ಆದ ಗುಣಗಳು ಇರುತ್ತವೆ. ಅದನ್ನೆಲ್ಲ ನಿಭಾಯಿಸುವ ಶಕ್ತಿ ಇರಬೇಕು. ಅದಕ್ಕೆಲ್ಲ ಸದ್ಯಕ್ಕೆ ನಾನು ಸಿದ್ಧನಿಲ್ಲ” ಎಂದು ಡಾಲಿ ಹೇಳಿದ್ದಾರೆ.
”ನಾನು ಚುನಾವಣಾ ಪ್ರಚಾರಗಳಿಗೆ ಹೋಗಿಲ್ಲ. ಎಲ್ಲ ಪಕ್ಷಗಳಲ್ಲಿ ಗೆಳೆಯರು ಇದ್ದಾರೆ. ಕರೆದಿದ್ದರೂ ನಾನು ಎಲೆಕ್ಷನ್ ಪ್ರಚಾರಕ್ಕೆ ಹೋಗಿಲ್ಲ. ಅದರಲ್ಲಿ ತೊಡಗಿಕೊಳ್ಳಲು ನನಗೆ ಇಷ್ಟ ಇಲ್ಲ. ನಾನು ಕಾಮನ್ ಮ್ಯಾನ್ ಆಗಿ ಇರಲು ಇಷ್ಟಪಡುತ್ತೇನೆ. ಈ ಬಾರಿ ಕೂಡ ಎಲೆಕ್ಷನ್ ಕ್ಯಾಂಪೇನ್ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ” ಎಂದು ಧನಂಜಯ ಹೇಳಿದ್ದಾರೆ.
”ಸಮಾಜದಲ್ಲಿ ಕೆಳಗೆ ಇರುವ ಜನರನ್ನು ಮೇಲಕ್ಕೆ ಎತ್ತುವ ಕೆಲಸ ಮಾಡುವವನೇ ಒಳ್ಳೆಯ ನಾಯಕ. ಅವರು ಯಾವ ಪಕ್ಷದಲ್ಲಾದರೂ ಇರಲಿ. ಅವರಿಗೆ ಸ್ಪಂದಿಸುವವರೆಲ್ಲ ಒಳ್ಳೆಯ ಪ್ರಜೆಗಳು. ರಾಜಕಾರಣ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ಲಿಡ್ಕರ್ ಉತ್ಪನ್ನಗಳಿಗೆ ಧನಂಜಯ್ ಪ್ರಚಾರ ರಾಯಭಾರಿ ಆಗಿದ್ದಾರೆ. ಇತ್ತೀಚೆಗೆ ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ, ಡಾಲಿ ಬರೆದ ಸಾಲುಗಳನ್ನು ಓದಿದ್ದರು. ಈ ಕಾರಣಗಳಿಂದ ಧನಂಜಯ್ ಹೆಸರು ರಾಜಕೀಯ ವಲಯದಲ್ಲಿ ಹೆಚ್ಚು ಕೇಳಿಬರಲು ಆರಂಭಿಸಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಡಾಲಿ ಧನಂಜಯ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು.
Be the first to comment