ಸೆನ್ಸೇಷನಲ್ ಸ್ಟಾರ್ ಕೋಮಲ್ ಅಭಿನಯದ 25ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ.
ಬಂಡೆ ಮಹಾಕಾಳಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ಚಿತ್ರಕ್ಕೆ ‘ಕುಟೀರ’ ಎಂಬ ಟೈಟಲ್ ಇಡಲಾಗಿದೆ.
ಚಿತ್ರವನ್ನು ಅನುಪ್ ಆಂಥೋನಿ ನಿರ್ದೇಶಿಸುತ್ತಿದ್ದು, ಶ್ರೀ ಕಂಸಾಳೆ ಫಿಲಂಸ್ ಬ್ಯಾನರ್ ನಲ್ಲಿ ಮಧು ಮರಿಸ್ವಾಮಿ ನಿರ್ಮಾಣ ಮಾಡಲಿದ್ದಾರೆ. ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಕೋಮಲ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಎನ್ ಎಂ ವಿಶ್ವ ಸಂಕಲನ, ರವಿವರ್ಮ ಹಾಗೂ ವಿಕ್ರಂ ಸಾಹಸ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಭರತ್ ಬಿ.ಜೆ. ಸಂಗೀತ ಸಂಯೋಜನೆ ನೀಡಲಿದ್ದಾರೆ.
“ನಾನು ಈವರೆಗೂ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಇದು ನಾಯಕನಾಗಿ ನಾನು ನಟಿಸುತ್ತಿರುವ 25ನೇ ಸಿನಿಮಾ. ಹಾರಾರ್ ಕಾಮಿಡಿ ಜಾನರ್ ಅಂದರೆ ನನಗೆ ಬಹಳ ಇಷ್ಟ. ಇದು ಕೂಡ ಅದೇ ಜಾನರ್‌ನ ಸಿನಿಮಾ. ಈ ಹಿಂದೆ ನಾನು ಕೆಲವು ಹಾರಾರ್ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಕಥೆ ಸ್ವಲ್ಪ ವಿಭಿನ್ನವಾಗಿದೆ. ಚಿತ್ರದ ಟೈಟಲ್ಲೇ ಹೇಳುವಂತೆ ಇಲ್ಲೂ ಒಂದು ದೊಡ್ಡ ಮನೆ ಇರುತ್ತದೆ. ಅಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುವ ನನಗೆ, ದೆವ್ವಗಳು ಏನು ಮಾಡುತ್ತವೆ ಎಂಬುದನ್ನು ಕಾಮಿಡಿ ಮೂಲಕ ನಿರ್ದೇಶಕರು ತೋರಿಸಲಿದ್ದಾರೆ” ಎಂದು ಕೋಮಲ್ ತಿಳಿಸಿದರು.
ಮಾರ್ಚ್ 2ನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ.
—–
Post Views:
162
Be the first to comment