ನಿರ್ದೇಶನ: ಅರುಣಾ
ಪಾತ್ರ ವರ್ಗ: ದೀಕ್ಷಿತ್ ಶೆಟ್ಟಿ, ಸಂಜನಾ ದಾಸ್, ಕಾಜಲ್ ಕುಂದರ್, ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ಇತರರು
ರೇಟಿಂಗ್: 3.5/5
ಲವ್ ಫೇಲ್ಯೂರ್ ಆದ ನಂತರವೂ ಬದುಕನ್ನು ಸುಂದರವಾಗಿ ಹೇಗೆ ಕಟ್ಟಿಕೊಳ್ಳಬಹುದು ಎನ್ನುವ ಸಂದೇಶದೊಂದಿಗೆ ತೆರೆಗೆ ಬಂದಿರುವ ಯೂತ್ ಫುಲ್ ಸಿನಿಮಾ ” ಕೆಟಿಎಂ”.
ಚಿತ್ರದ ಶೀರ್ಷಿಗೆಗೂ ಕೆಟಿಎಂ ಬೈಕಿಗೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರದ ಶೀರ್ಷಿಕೆಯಲ್ಲಿ ಸಿನಿಮಾದ ಕಥೆ ಇದೆ. ಇದು ಏನು ಎಂದು ತಿಳಿಯಲು ಚಿತ್ರವನ್ನು ನೋಡಬೇಕಿದೆ.
ಆರಂಭದಲ್ಲಿ ಪ್ರೀತಿ ಪ್ರೇಮ ಎಂದು ಓಡುವ ಚಿತ್ರ ಬಳಿಕ ಸಾಮಾನ್ಯ ಲವ್ ಸ್ಟೋರಿಗಳಿಗಿಂತ ಭಿನ್ನವಾಗಿ ಟ್ವಿಸ್ಟ್ ಪಡೆದುಕೊಳ್ಳುತ್ತದೆ. ನಾಯಕ ದೇವದಾಸ ಆದರೂ, ಬಳಿಕ ನಿರ್ದೇಶಕರು ಟ್ವಿಸ್ಟ್ ನೀಡಿ ಚಿತ್ರಕಥೆ ಬೇರೆ ದಿಕ್ಕಿನತ್ತ ಸಾಗುವಂತೆ ಮಾಡಿದ್ದಾರೆ. ನಿರ್ದೇಶಕರು ಸ್ಪಷ್ಟವಾಗಿ ಕಥೆಯನ್ನು ಹೆಣೆದಿರುವ ಕಾರಣ ಇಲ್ಲಿ ಪ್ರೇಮಿಗಳಿಗೆ, ಪೋಷಕರಿಗೆ, ಸ್ನೇಹಿತರಿಗೆ ಸಂದೇಶ ಸಹ ಸಿಕ್ಕಿದೆ.
ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಹಲವು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದೆ. ಉಳಿದಂತೆ ನಾಯಕಿಯರಾದ ಕಾಜಲ್ ಕುಂದರ್ ಹಾಗೂ ಸಂಜನಾ ದಾಸ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮ್ಮಿ ನಾಡು, ಬಾಬು ಹಿರಣ್ಣಯ್ಯ ಇತರರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಯುವ ಮನಸುಗಳನ್ನು ಮುಟ್ಟುವ ಚಿತ್ರವಾಗಿ ಕೆಟಿಎಂ ಗಮನ ಸೆಳೆಯುತ್ತದೆ.
____
Be the first to comment