ಧ್ರುವಸರ್ಜಾ ರ ಎಂಗೇಜ್ ಮೆಂಟ್’ಗೆ ಮಹೂರ್ತ ಫಿಕ್ಸ್.!

ಸ್ಯಾಂಡಲ್ ವುಡ್ ನಲ್ಲಿ ತನ್ನ ಆಕ್ಷನ್ ಹಾಗೂ ಡೈಲಾಗ್ ಮೂಲಕ ಆಕ್ಷನ್ ಪ್ರಿನ್ಸ್ ಎಂದೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಧ್ರುವ ಸರ್ಜಾ ಎಂಗೇಜ್ಮೆಂಟ್ ಆಗಲು ತಯಾರಿ ನಡೆಸಿದ್ದಾರೆ. ಭರ್ಜರಿ, ಬಹುದ್ದೂರ್ ಚಿತ್ರಗಳಲ್ಲಿ ಮನೋಜ್ಞ ಅಭಿನಯವನ್ನು ನೀಡಿ ಪ್ರೇಕ್ಷಕರ ಮನಸ್ಸನ್ನು ಗೆದ್ದಂತ ಈ ನಟ ಡಿಸೆಂಬರ್ 9ರಂದು ಬನಶಂಕರಿಯಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಸಕಲ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರಂತೆ.

ಈ ಒಂದು ಎಂಗೇಜ್ಮೆಂಟ್ ಗೆ ಕಲಾ ನಿರ್ದೇಶಕ ಅರುಣ್ ಸಾಗರ್ ಭವ್ಯ ಸೆಟ್ ಹಾಕಲಿದ್ದಾರಂತೆ. ಇತ್ತೀಚಿಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಧ್ರುವ ಸರ್ಜಾ ಮುಂದಿನ ವರ್ಷದೊಳಗೆ ಮದುವೆಯಾಗುತ್ತೇನೆ ಎಂದು ಹೇಳಿದರು, ಅದರ ಪ್ರಕಾರವೇ ಡಿಸೆಂಬರ್ 9 ರಂದು ಎಂಗೇಜ್ಮೆಂಟ್ ನಡೆಯಲಿದ್ದು ಬಳಿಕ ಡಿಸೆಂಬರ್ 31ರ ಒಳಗೆ ಮದುವೆ ಆಗುವ ಸಾಧ್ಯತೆ ಇದೆಯಂತೆ.

ಧ್ರುವ ಮದುವೆಯಾಗುವ ನಾಯಕಿ ಸಿನಿಮಾ ನಟಿಯೇ ಅಥವಾ ಕುಟುಂಬದಲ್ಲಿ ನೋಡಿರುವ ಹುಡುಗಿಯೇ ಎಂಬ ಮಾಹಿತಿ ಇನ್ನೂ ಹೊರಬಂದಿಲ್ಲ. ಇವರ ಎಂಗೇಜ್ಮೆಂಟ್ ಗೆ ಚಿತ್ರೋದ್ಯಮದ ಬಳಗವೇ ಬರಲಿದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!