ನಿಷ್ಕರ್ಷ, ಬೆಳದಿಂಗಳಬಾಲೆ, ಹೂಮಳೆ ಚಿತ್ರಗಳಲ್ಲಿ ಮಿಂಚಿ ಮರೆಯಾಗಿದ್ದ ನಟಿ ಸುಮನ್ ನಗರ್ಕರ್ ಮದುವೆ ಆದ ನಂತರ ವಿದೇಶದಿಂದ ಕರುನಾಡಿಗೆ ಹಾರಿ ಬಂದಿದ್ದೆ ಅಲ್ಲದೆ ಬ್ರಾಹ್ಮಿ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಮರಳಿದ್ದಾರೆ.ಬಣ್ಣದ ಲೋಕದ ಮೇಲಿನ ಪ್ರೀತಿಯ ಮೇಲಿಂದಲೋ ಏನೋ ಸುಮನ್ನಗರ್ಕರ್ ಅವರು ತಮ್ಮ ಪತಿ ಗುರುದೇವ್ ಹಾಗೂ ಅವರ ಗೆಳೆಯರನ್ನು ಸೇರಿಸಿಕೊಂಡು ಸುಮನ್ ನಗರ್ಕರ್ ಪ್ರೊಡಕ್ಷನ್ ಅಡಿಯಲ್ಲಿ ಬ್ರಾಹ್ಮಿ ಚಿತ್ರಕ್ಕೆ ಬಂಡವಾಳನ್ನೂ ಹೂಡಿದ್ದಾರೆ.ಸಾಮಾನ್ಯವಾಗಿ ಲೋಕ ಸೃಷ್ಟಿಸಿದವನಿಗೆ ಬ್ರಹ್ಮ ಎಂದರೆ ಆತನ ಪತ್ನಿ, ವಿದ್ಯಾಕ್ಕೆ ಅಧಿದೇವತೆಯಾದ ಸರಸ್ವತಿಯನ್ನು ಬ್ರಾಹ್ಮಿ ಎಂದು ಕರೆಯುತ್ತಾರೆ, ನಮ್ಮ ಈ ಚಿತ್ರಕ್ಕೆ ಆ ಟೈಟಲ್ಲೇ ಸೂಕ್ತ ಎಂದರಿತು ಆ ಟೈಟಲ್ ಇಟ್ಟಿದ್ದಾರಂತೆ. ಇಡೀ ಚಿತ್ರವು ನಾಯಕ, ನಾಯಕಿ, ಮತ್ತೊಂದು ಪಾತ್ರದ ಸುತ್ತಲೇ ಸುತ್ತಲಿದ್ದು, ಮಧ್ಯಮ ವರ್ಗದ ಮಹಿಳೆಯ ಬಾಳಿನಲ್ಲಿ ದುರಂತ ನಡೆದಾಗ ಅದನ್ನು ಆಕೆ ಹೇಗೆ ಎದುರಿಸುತ್ತಾಳೆ ಎಂಬುದೇ ಚಿತ್ರದ ಕಥೆಯಾಗಿದ್ದು, ಸುಮನ್ನಗರ್ಕರ್ ಸಂಗೀತದ ಕಾಯಕವನ್ನು ಮಾಡುವ ಪಾತ್ರದಲ್ಲಿ ನಟಿಸಿದ್ದಾರೆ.ಅಘಾತಕ್ಕೆ ಒಳಗಾಗುವುದು. ಭಯ ಪಡುವುದು, ಅದನ್ನು ಭಯದಿಂದಲೇ ಎದುರಿಸುತ್ತಾ, ಛಾಲೆಂಜ್ ಆಗಿ ತೆಗೆದುಕೊಳ್ಳುವುದು. ಮನಸ್ಸಿನ ಭಾವನೆ, ಅಂತರಂಗದ ಯುದ್ದ, ಬದುಕಿನ ತಾಕಲಾಟ ಎಲ್ಲರಲ್ಲೂ ಇರುವ ಸಂಗೀತ ಮತ್ತು ಸಂಗೀತಗಾರ್ತಿ ಮಹಿಳಾ ಆಧಾರಿತಕತೆಯಾಗಿದೆ. ತಂದೆ, ಎಲ್ಲವನ್ನು ನಿರ್ವಹಿಸುವ ವ್ಯವಸ್ಥಾಪಕನಲ್ಲದ ಸಮಾಜದಲ್ಲಿ ಸಮತೋಲನದ ವ್ಹಕ್ತಿಯಾಗಿ ಹಿರಿಯ ನಟ ರಮೇಶ್ಭಟ್ ಕಾಣಿಸಿಕೊಂಡಿದ್ದಾರೆ. ಮೋಜೋ ಚಿತ್ರದಲ್ಲಿ ನಟಿಸಿದ್ದ ರಂಗಭೂಮಿ ನಟಿ ಅನುಷಾಕೃಷ್ಣ ಈ ಚಿತ್ರದಲ್ಲಿ ಗಿಟಾರಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದು ಅದಕ್ಕಾಗಿ ಗಿಟಾರ್ ಅನ್ನು ಒಬ್ಬವ ವಿದ್ಯಾರ್ಥಿಯಂತೆ ಕಲಿತಿದ್ದಾರಂತೆ.
Be the first to comment