ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಈ ವಾರ ಒಟ್ಟು 7 ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ.
ಫೆಬ್ರವರಿ 8ರಂದು ವಿನಯ್ ರಾಜಕುಮಾರ್ ಅಭಿನಯದ ಒಂದು ಸರಳ ಪ್ರೇಮ ಕಥೆ ಬಿಡುಗಡೆ ಆಗಲಿದೆ. ಉಳಿದಂತೆ ಫೆಬ್ರವರಿ 9ರಂದು ರಾಜವರ್ಧನ್ ನಟನೆಯ ಪ್ರಣಯಂ, ಶ್ರೀ ಮಹಾದೇವ್ ಅಭಿನಯದ ಜಸ್ಟ್ ಪಾಸ್, ಪೃಥ್ವಿ ಅಂಬರ್ ಅಭಿನಯದ ಜೂನಿ, ರಾಗಿಣಿ ದ್ವಿವೇದಿ ಅಭಿನಯದ ಇಮೇಲ್, ನಗುವಿನ ಹೂಗಳ ಮೇಲೆ, ಮಾಯೆ ಆಂಡ್ ಕಂಪನಿ ಚಿತ್ರಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.
ಉಳಿದಂತೆ ಮುಂದಿನ ವಾರ ಕೂಡ ದೊಡ್ಡ ಸಂಖ್ಯೆಯಲ್ಲಿ ಚಿತ್ರಗಳು ತೆರೆಗೆ ಬರುತ್ತಿವೆ. 5ಡಿ, ರವಿಕೆ ಪ್ರಸಂಗ, ಮಂಡ್ಯ ಹೈದ, ಸಾರಾಂಶ, ಲೇಡೀಸ್ ಬಾರ್ ಚಿತ್ರಗಳು ಮುಂದಿನ ವಾರ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಬಿಡುಗಡೆ ಪಟ್ಟಿಗೆ ಇನ್ನಷ್ಟು ಚಿತ್ರಗಳು ಸೇರ್ಪಡೆ ಆಗುವ ಸಾಧ್ಯತೆ ಇದೆ.
ಕನ್ನಡದಲ್ಲಿ ಸಂಕ್ರಾಂತಿ ಬಳಿಕ ಪ್ರತಿ ವಾರ ಕನಿಷ್ಠ 5 ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ ಬಹುತೇಕ ಚಿತ್ರಗಳು ಹೊಸಬರ, ಸ್ಟಾರ್ ಚಿತ್ರಗಳು ಅಲ್ಲದ ಕಾರಣ ಪ್ರೇಕ್ಷಕರು ಚಿತ್ರಮಂದಿರಗಳ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಡುಗಡೆಗೆ ಸಿದ್ದಗೊಂಡಿರುವ ಚಿತ್ರಗಳನ್ನು ಪ್ರೇಕ್ಷಕರು ಯಾವ ರೀತಿ ಹರಸುತ್ತಾರೆ ಎಂದು ಕಾದು ನೋಡಬೇಕಿದೆ.
____
Be the first to comment