ಫೆ.2ರಂದು ಕರಾವಳಿಯಲ್ಲಿ “ಕ್ಲಾಂತ” ತೆರೆಗೆ

ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರುವ ಸಸ್ಪೆನ್ಸ್‌ ಥ್ರಿಲ್ಲರ್‌ “ಕ್ಲಾಂತ” ಸಿನಿಮಾ ಫೆ.2ರಂದು ಕರಾವಳಿಯಲ್ಲಿ ತೆರೆಗೆ ಅಪ್ಪಳಿಸಲಿದೆ.

ಕ್ಲಾಂತ ಸಿನೆಮಾ ಈಗಾಗಲೇ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. “ಕ್ಲಾಂತ” ಸಿನೆಮಾ ಫೆಬ್ರವರಿ 2ರಂದು ಕರಾವಳಿಯ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರಕ್ಕೆ ವೈಭವ್ ಪ್ರಶಾಂತ್ ನಿರ್ದೇಶನ ಮಾಡಿದ್ದು ವಿಘ್ನೇಶ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಹಿಂದೆ ತೆರೆಕಂಡಿದ್ದ ದಗಲ್ ಬಾಜಿಲು ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಘ್ನೇಶ್‌ ಈ ಮೂಲಕ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಕ್ಲಾಂತ ಸಿನಿಮಾ ಮೂಲಕ ನಟಿ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

ಚಿತ್ರದ ನಾಯಕ ವಿಘ್ನೇಶ್ ಚಿತ್ರದಲ್ಲಿ ಆಕ್ಷನ್ ಮೂಲಕ ಮಿಂಚುವ ಯತ್ನ ಮಾಡಿದ್ದಾರೆ. ಸಂಗೀತ ಭಟ್  ಅವರ ನಟನೆ ಹಾಗೂ ಆಕ್ಷನ್ ಗೂ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗಿದೆ.

ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಉದಯ್ ಅಮ್ಮನ್ಯ ಅವರ ಬೆಂಬಲ ಈ ಚಿತ್ರಕ್ಕಿದೆ.  ಚಿತ್ರಕ್ಕೆ ಎಪಿ ಚಂದ್ರಕಾಂತ್ ಅವರ ಸಂಗೀತ, ಮೋಹನ್ ಲೋಕನಾಥನ್ ಅವರ ಛಾಯಾಗ್ರಹಣ,  ಪಿಆರ್ ಸೌಂದರ್ ರಾಜ್ ಅವರ ಸಂಕಲನವಿದೆ. ಸಿನಿಮಾದ ಮೂರು ಹಾಡುಗಳಿಗೆ ಎಸ್‌. ಪಿ ಚಂದ್ರಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್‌, ನಯನಾ ನಾಗರಾಜ್‌, ರಾಜೇಶ್‌ ಕೃಷ್ಣನ್‌, ಚೇತನ್‌, ಐರಾ ಆಚಾರ್ಯ ಮೊದಲಾದವರು ಧ್ವನಿಯಾಗಿದ್ದಾರೆ.

ಕೃತಿಯ ಮಧ್ಯೆ ವಿಹಾರ ಹೋಗುವ ಪ್ರೇಮಿಗಳಿಗೆ ಕಾಡಿನ ಸಂಪತ್ತನ್ನು ದೋಚುವ ದುಷ್ಟರು ತೊಂದರೆ ನೀಡುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುವ ವೇಳೆ ಅವರಿಗೆ ಪ್ರಾಣಾಪಾಯದ ಭೀತಿ ಎದುರಾಗುತ್ತದೆ. ಮುಂದೆ ಪ್ರೇಮಿಗಳಿಂದ ಒಂದಷ್ಟು ಪ್ರಮಾದ ನಡೆಯುತ್ತದೆ. ಅದು ಏನು ಎಂದು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.

ಚಿತ್ರವನ್ನು ಸುಂದರ ಲೊಕೇಶನ್ ನಲ್ಲಿ ಸೆರೆ ಹಿಡಿಯಲಾಗಿದ್ದು ಇದು ಪ್ರೇಕ್ಷಕರಿಗೆ ಹಿತ ಅನಿಸುತ್ತದೆ. ಕ್ಲಾಂತ ಎಲ್ಲರೂ ಕುಳಿತುಕೊಂಡು ನೋಡುವ ಚಿತ್ರವಾಗಿ ಮೂಡಿ ಬಂದಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!