ಕ್ಲಾಂತ ಸಿನಿಮಾ ಜನವರಿ 19ಕ್ಕೆ ತೆರೆಗೆ

ದಕ್ಷಿಣ ಕನ್ನಡ ಜಿಲ್ಲೆಯ ಸಿನಿಮಾ ಪ್ರೇಮಿಗಳು ಜೊತೆ ಸೇರಿಕೊಂಡು ನಿರ್ಮಿಸಿರುವ ಕ್ಲಾಂತ ಚಿತ್ರ ಜನವರಿ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ನಟ ಅಜಯ್ ರಾವ್ ಟ್ರೈಲರ್ ಬಿಡುಗಡೆಗೊಳಿಸುವ ಜೊತೆಗೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಅಜಯ್ ರಾವ್, ಟ್ರೈಲರ್ ತುಂಬಾ ಆಕ್ಷನ್ ನಿಂದ ಕೂಡಿದೆ. ಚಿತ್ರತಂಡ ಉತ್ತಮ ಪ್ರಯತ್ನವನ್ನು ಮಾಡಿದೆ. ಹೀರೋ, ಹೀರೋಯಿನ್ ಎಲ್ಲರೂ ಟ್ರೈಲರ್ ನಲ್ಲಿ ಚೆನ್ನಾಗಿ ಕಾಣಿಸಿದ್ದಾರೆ ಎಂದು ಹೇಳಿದರು.

ನಿರ್ದೇಶಕ ವೈಭವ ಪ್ರಶಾಂತ್ ಮಾತನಾಡಿ, ಈ ಚಿತ್ರದ ಜೊತೆಗೆ ನನ್ನ ಜರ್ನಿ ಒಂದೂವರೆ ವರ್ಷದ್ದು ಆಗಿದೆ. ಕ್ಲಾಂತ ಎಂದರೆ ಆಯಾಸ ಎಂದರ್ಥ. ಲಾಕ್ ಡೌನ್ ಸಮಯದಲ್ಲಿ ಸ್ಕ್ರಿಪ್ಟ್ ಮಾಡಿಕೊಂಡಿದ್ದೆವು. ಶೂಟಿಂಗ್ ಅನ್ನು ಸುಮಾರು 40 ದಿನಗಳ ಕಾಲ ಸುಬ್ರಹ್ಮಣ್ಯ, ಕುದುರೆಮುಖ ಕಾಡುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ನಟ ವಿಘ್ನೇಶ್ ಅವರು ಮಾತನಾಡಿ, ಈ ಹಿಂದೆ ನಾನು ದಗಲ್ ಬಾಜಿಲು ಎನ್ನುವ ತುಳು ಚಿತ್ರ ಮಾಡಿದ್ದೆ. ಇದು ನನ್ನ ಕನ್ನಡದ ಮೊದಲ ಚಿತ್ರ ಎಂದು ಹೇಳಿದರು.

ಸಿನಿಮಾಗೆ ವೈಭವ ಪ್ರಶಾಂತ್ ಅವರು ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಲ್ಲಿ ಉದಯ್ ಅಮ್ಮಣ್ಣಾಯ ಕೆ ಚಿತ್ರವನ್ನು ನಿರ್ಮಿಸಿದ್ದಾರೆ. ವಿಘ್ನೇಶ್ ಅವರ ಜೊತೆಗೆ ನಾಯಕಿಯಾಗಿ ಸಂಗೀತಾ ಭಟ್ ನಟಿಸಿದ್ದಾರೆ. ಶೋಭರಾಜ್, ವೀಣಾ ಸುಂದರ್, ಸಂಗೀತ, ಪ್ರವೀಣ್ ಜೈನ್, ದೀಪಿಕಾ ಇತರರು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಚಂದ್ರಕಾಂತ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಕೊರಗಜ್ಜ ಪವಾಡವನ್ನು ವಿಶೇಷವಾಗಿ ತೋರಿಸುವ ಯತ್ನ ಮಾಡಲಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಜನಪ್ರಿಯವಾಗಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!