Mandya Haida : ಫೆಬ್ರವರಿ 16ಕ್ಕೆ ಮಂಡ್ಯ ಹೈದ ತೆರೆಗೆ

ಯುವ ನಟ ಅಭಯ್ ಚಂದ್ರಶೇಖರ್ ನಟಿಸಿರುವ ಮಂಡ್ಯ ಹೈದ ಚಿತ್ರ ಫೆಬ್ರವರಿ 16ರಂದು ತೆರೆಗೆ ಬರಲಿದೆ.

ಈ ಚಿತ್ರವನ್ನು ವಿ ಶ್ರೀಕಾಂತ್ ಅವರು ಕಥೆ, ಚಿತ್ರಕಥೆ ಬರೆಯುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಅಭಯ್ ಅವರ ತಂದೆ ಚಂದ್ರಶೇಖರ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಿರುತೆರೆ ನಟಿ ಭೂಮಿಕಾ ಅವರು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಲವ್ ಸಬ್ಜೆಕ್ಟ್ ಹೊಂದಿರುವ ಚಿತ್ರಕ್ಕೆ ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಂತೋನಿ ದಾಸನ್ ಹಾಡುಗಳಿಗೆ ಕಂಠ ನೀಡಿದ್ದಾರೆ. ಮನು ಜಗದೀಶ್ ಗೌಡ ಅವರು ಸಿನಿಮಟೋಗ್ರಫಿ ಮಾಡಿದ್ದಾರೆ.

ಚಿತ್ರದಲ್ಲಿ ಬಾಲ ರಾಜವಾಡಿ, ಸದಾನಂದ ಕಲಿ, ಚಿದಂಬರ ಪೂಜಾರಿ, ಮನೋಹರ್ ಗೌಡ ಇತರರು ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!