200 ಕೋಟಿಯ ದಾಖಲೆಯತ್ತ ಕಾಟೇರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ 200 ಕೋಟಿಯ ದಾಖಲೆ ಬರೆಯುವ ಹೊಸ್ತಿಲಲ್ಲಿದೆ!

ಕಾಟೇರ ಚಿತ್ರ 18 ದಿನಗಳಲ್ಲಿ 190 ಕೋಟಿ ರೂ. ಗಳಿಸಿದೆ. ಚಿತ್ರದ ಈಗಿನ ಅಬ್ಬರ ಮುಂದುವರಿದರೆ ಶೀಘ್ರದಲ್ಲೇ ಕಾಟೇರ 200 ಕೋಟಿ ರೂ. ಕ್ಲಬ್ ಸೇರುವುದು ಖಚಿತ ಎನ್ನಲಾಗಿದೆ. ಮೂರನೇ ವಾರದಲ್ಲೂ ‘ಕಾಟೇರ’ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಿ,  ಸಿ ಸೆಂಟರ್‌ಗಳಲ್ಲಿ ಸಿನಿಮಾ ನೋಡಲು ಜನರು ಮುಗಿಬಿದ್ದಿದ್ದಾರೆ.

ಕರ್ನಾಟಕ ಮಾತ್ರವಲ್ಲ, ದುಬೈನಲ್ಲೂ ಕಾಟೇರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರತಂಡ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಂಭ್ರಮಿಸಿದ್ದರು.

ಕಾಟೇರ ಸಿನಿಮಾದಲ್ಲಿ ಧಣಿಗಳ ಅಡಿಯಾಳಾಗಿ ದುಡಿಯುವ ಕೃಷಿಕರ  ಬವಣೆಯನ್ನು ಕಥಾನಾಯಕನಿಂದ ಹೇಳಿಸಲಾಗಿದೆ.  ಜಾತಿ ಹೆಸರಿನ ಕುಲುಮೆಯಲ್ಲಿ ಬೆಂದು ಶೋಷಣೆಗೊಳಗಾದವರ, ಸಮಸ್ಯೆಗಳನ್ನೇ ಹೊದ್ದು ಜೀವಿಸುವ ರೈತರ, ಮರ್ಯಾದಾ ಹತ್ಯೆಯಂಥ ಕಟು ಪದ್ಧತಿಗಳ ವಿರುದ್ಧ ಸಿನಿಮಾ ಮಾತನಾಡಿದೆ.

ಮಾಲಾಶ್ರೀ ಪುತ್ರಿ ಆರಾಧನಾ, ಜಗಪತಿ ಬಾಬು, ವಿನೋದ್‌ ಆಳ್ವಾ, ಶ್ರುತಿ, ಕುಮಾರ್‌ ಗೋವಿಂದ್‌, ಅವಿನಾಶ್‌, ಅಚ್ಯುತ್‌ ಕುಮಾರ್‌, ವೈಜನಾಥ್‌ ಬಿರಾದಾರ, ಮಾಸ್ಟರ್‌ ರೋಹಿತ್‌ ತಾರಾಗಣದಲ್ಲಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!