ಬೆಂಗಳೂರಿನ ತಿಗಳರ ಪೇಟೆ ಸಮೀಪ 80ರ ದಶಕದಲ್ಲಿ ನಡೆದ ಹಿಂದೂ ಹಾಗೂ ಮುಸ್ಲಿಂ ಯುವ ಪ್ರೇಮಿಗಳ ಪ್ರೇಮ ಕಥೆಯ ಜೊತೆಗೆ ಸೇಡಿನ ಸಿನಿಮಾವಾಗಿ ಕೈವ ಈ ವಾರ ತೆರೆಯ ಮೇಲೆ ಬಂದಿದೆ
ಬೆಂಗಳೂರಿನಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ತೆರೆಯ ಮೇಲೆ ತರಲಾಗಿದೆ. ಕೈವ ಹಾಗೂ ಸಲ್ಮಾ ಅವರ ನಡುವಣ ಪ್ರೇಮ ಕಥೆ ಬೆಂಗಳೂರಿನ ಕರಗ ಮಹೋತ್ಸವದ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತದೆ. ಮುಂದೆ ಕಪಾಲಿ ಚಿತ್ರಮಂದಿರದಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ಪ್ರದರ್ಶನ ಆಗುತ್ತಿದ್ದ ಸಂದರ್ಭದಲ್ಲಿ ಗಂಗಾರಾಮ್ ಕಟ್ಟಡ ದುರಂತ ನಡೆದಾಗ ಸಲ್ಮಾ ಮೇಲೆ ಆಸಿಡ್ ದಾಳಿ ನಡೆಯುತ್ತದೆ. ಈ ವೇಳೆ ಕೈವ ಅಪರಾಧ ಎಸಗಿದ ದುರುಳರ ಮೇಲೆ ಸೇಡು ತೀರಿಸಿಕೊಂಡು ಕೊಂದು ಹಾಕುತ್ತಾನೆ. ಹೀಗೆ ಪ್ರೇಮ ಕಥೆಯ ಜೊತೆಗೆ ಸೇಡಿನ ಜ್ವಾಲೆಯಾಗಿ ಕಥೆ ತೆರೆಯ ಮೇಲೆ ಬಂದಿದೆ.
ಹಿಂದೂ ಮುಸ್ಲಿಂ ಯುವ ಪ್ರೇಮಿಗಳ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಕೈವ ಪಾತ್ರದಲ್ಲಿ ಧನ್ವೀರ್ ಗೌಡ ಅಬ್ಬರಿಸಿದ್ದಾರೆ. ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಾತು ಬಾರದ ಸಲ್ಮಾ ಪಾತ್ರದಲ್ಲಿ ನಟಿಸಿರುವ ಮೇಘಾ ಶೆಟ್ಟಿ ಅತ್ಯುತ್ತಮವಾಗಿ ನಡೆಸಿದ್ದಾರೆ. ರಮೇಶ್ ಇಂದಿರಾ, ಉಗ್ರಂ ಮಂಜು ಇವರೆಲ್ಲರ ಅಭಿನಯ ಉತ್ತಮವಾಗಿ ಮೂಡಿ
ಬಂದಿದೆ.
ನಿಜ ಘಟನೆಯನ್ನು ಆಧರಿಸಿದ ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದೆ.
____
Be the first to comment