ಈ ವಾರ 6 ಸಿನಿಮಾ ತೆರೆಗೆ

ಸ್ಯಾಂಡಲ್​ವುಡ್‌ನಲ್ಲಿ ಶುಕ್ರವಾರ ಪೈಪೋಟಿಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಈ ವಾರವೂ ಹೊಸಬರ 6 ಸಿನಿಮಾಗಳು ಬಿಡುಗಡೆ ಆಗಿವೆ.

ಈ ವಾರ ಅರವಿಂದ್‍ ಕೆ.ಪಿ. ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ಧಂಬರ್ಧ ಪ್ರೇಮಕಥೆ,  ಪ್ರಭು ಮುಂಡ್ಕೂರ್ ಅಭಿನಯದ ರಾಂಚಿ,  ಅರ್ಜುನ್‍ ಯೋಗಿ ಅಭಿನಯದ ಅನಾವರಣ, ದತ್ತಣ್ಣ, ಗೋಪಾಲಕೃಷ್ಣ ದೇಶಪಾಂಡೆ ನಟಿಸಿರುವ ಯಥಾಭವ, ಹೊಸಬರ ಗಾರುಡಿಗ ಮತ್ತು ಶೋಷಿತೆ ಎಂಬ ಚಿತ್ರಗಳು ರಿಲೀಸ್ ಆಗಿವೆ.

ಅರವಿಂದ್‍ ಕೆ.ಪಿ. ಮತ್ತು ದಿವ್ಯಾ ಉರುಡುಗ ಅಭಿನಯದ ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.  ಅರವಿಂದ್ ಕೌಶಿಕ್ ನಿರ್ದೇಶನವಿರುವ ಈ ಚಿತ್ರ ಟ್ರೇಲರ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಳೆದ ವಾರ ಒಟ್ಟು ಐದು ಚಿತ್ರಗಳು ತೆರೆ ಕಂಡಿದ್ದವು. ಈ ವಾರ ಆರು ಚಿತ್ರಗಳು ಬಿಡುಗಡೆಯಾಗುವ ಮೂಲಕ ಪ್ರಸ್ತುತ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 200 ದಾಟಿದೆ.

ಕಳೆದ ವಾರ ಅಭಿಷೇಕ್ ಅಂಬರೀಷ್ ಅಭಿನಯದ ಬ್ಯಾಡ್‍ ಮ್ಯಾನರ್ಸ್, ರಾಜ್ ಬಿ.ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ,  ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ, ಎಲೆಕ್ಟ್ರಾನಿಕ್‍ ಸಿಟಿ, ಸ್ಕೂಲ್‍ ಡೇಸ್‍ ಚಿತ್ರಗಳು ರಿಲೀಸ್ ಆಗಿದ್ದವು.

Be the first to comment

Leave a Reply

Your email address will not be published. Required fields are marked *

Translate »
error: Content is protected !!