ರಾಮ್ ಗೋಪಾಲ್ ವರ್ಮಾ ಹೋಮ್ ಬ್ಯಾನರ್ನಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರ ಭೈರವ ಗೀತಾ. ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ ನವ ನಿರ್ದೇಶಕ ಸಿದ್ಧಾರ್ಥ್. ಭೈರವ ಗೀತಾ ಚಿತ್ರದ ಟ್ರೇಲರ್ ಲಾಂಚ್ ಮಾಡುವ ಸಲುವಾಗಿ ಸೌಥ್ ಇಂಡಿಯಾ ಕಾಂಟ್ರವರ್ಸಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಹಾಗೂ ಚಿತ್ರದ ನಿರ್ದೇಶಕ ಸಿದ್ದಾರ್ಥ್ ಬೆಂಗಳೂರಿಗೆ ಬಂದಿದ್ದರು. ನಗರದ ಜಿಟಿ ಮಾಲ್ನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದರು.
ಭೈರವ ಗೀತಾ ಚಿತ್ರದ ಬಗ್ಗೆ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ಧನಂಜಯ್ ಒಬ್ಬ ಮೆಥಡ್ ಆ್ಯಕ್ಟರ್. ಲಾಸ್ಟ್ ಟೈಮ್ ಟಗರು ಚಿತ್ರ ನೋಡ್ದಾಗ ಧನಂಜಯ್ ತುಂಬಾ ಇಷ್ಟ ಆದ್ರೂ,
ಭೈರವ ಗೀತಾ ಸ್ಕ್ರಿಪ್ಟ್ ಕೇಳಿದಾಗ ಭೈರವನ ರೋಲ್ಗೆ ಡಾಲಿ ಸೂಕ್ತ ಅನ್ನಿಸಿದ್ರು. ದಕ್ಷಿಣ ಭಾರತದಲ್ಲಿ ಧನಂಜಯ್ ಅಂತ ಮೆಥಡ್ ಆ್ಯಕ್ಟರ್ ಅನ್ನು ಮೊದಲ ಬಾರಿ ನೋಡಿದ್ದು. ಭೈರವ ಗೀತಾ ಒಂದು ವೈಲಂಟ್ ಸಿನೆಮಾವಾಗಿದ್ದು ಅದ್ರಲ್ಲಿ ಒಳ್ಳೆ ಲವ್ ಸ್ಟೋರಿ ಇದೆ. ಹಿರೋಯಿನ್ ಪಾತ್ರಕ್ಕೆ ಒಂದು ಕಂಪ್ಲೀಟ್ ಭಾರತೀಯ ಕ್ಲಾಸಿಕ್ ನಾರಿ ಬೇಕಿತ್ತು. ಅದರಂತೆ ನಮಗೆ ಐರಾ ಸಿಕ್ಕಿದ್ರು. ಇನ್ನು ಸಿದ್ದಾರ್ಥ್ ನನ್ನ ಜೊತೆಯಲ್ಲಿದ್ದ ಹುಡುಗ. ಆತನ ವಯಸ್ಸು ಚಿಕ್ಕದಾದ್ರೂ ಟ್ಯಾಲೆಂಟ್ ದೊಡ್ಡದು.
ಒಂದು ಒಳ್ಳೆ ಪ್ರಯತ್ನ ಮಾಡಿದ್ದಾನೆ ಎಂದು ನಿರ್ದೇಶಕ ಹಾಗೂ ನಾಯಕನ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಡಾಲಿ ಭೈರವನಾಗಿ ಅವತಾರವೆತ್ತಿದ್ದು ಚಿತ್ರದ ಬಗ್ಗೆ ಆರ್ಜಿವಿ ಸಾಕಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಭೈರವ ಗೀತಾ ಚಿತ್ರ ರಾಯಲ ಸೀಮೆಯ ಪಕ್ಕಾ ರಗಡ್ ಲವ್ ಸ್ಟೋರಿ ಚಿತ್ರವಾಗಿದ್ದು ಟ್ರೈಲರ್ನಲ್ಲಿ ಮೈ ಜುಮ್ಮೆನುಸುವ ಆಕ್ಷನ್ ಸೀನ್ಗಳಿವೆ. ಟ್ರೈಲರ್ನಲ್ಲಿ ಮಾಸ್ ಅನ್ನು ವೈಲೆಂಟಾಗಿ ತೋರಿಸಿ ಪ್ರೀತಿಯನ್ನು ರೊಮ್ಯಾಂಟಿಕ್ ಆಗಿ ತೋರಿಸಲಾಗಿದೆ. ಆರ್ಜಿವಿ ಚಿತ್ರಗಳಲ್ಲಿ ಎಡಿಟರ್ ಆಗಿ ಕೆಲಸ ಮಾಡಿದ ಹುಡುಗನ ಮೇಲೆ ನಂಬಿಕೆ ಇಟ್ಟು ಆರ್ಜಿವಿ ನಿರ್ದೇಶಕನದ ಕ್ಯಾಪ್ ತೊಡಿಸಿದ್ದಾರೆ.
ಚಿತ್ರದ ಟ್ರೈಲರ್ ಸಖತ್ ಕುತೂಹಲಕಾರಿಯಾಗಿದ್ದು, ತೆರೆಮೆಲೆ ಭೈರವ ಗೀತಾಳ ಪ್ರೇಮ್ ಕಹಾನಿ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಮಲೆಯಾಳಿ ನಾಲ್ಕು ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದ್ದು, ತೆಲುಗು ಟ್ರೈಲರ್ ಅನ್ನು ಸಹ ಬಿಡುಗಡೆ ಮಾಡಿದರು. ಇದೇ ತಿಂಗಳ 17 ರಂದು ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿ, ಚಿತ್ರವನ್ನು ಇದೇ ತಿಂಗಳ 22 ರಂದು ವಿಶ್ವದಾದ್ಯಂತ ರಿಲೀಸ್ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿದೆ. ಆದ್ರೆ ಇನ್ನೂ ಭೈರವ ಸೆನ್ಸಾರ್ ಅಂಗಳ ತಲುಪಿಲ್ಲ. ರಾಯಲ ಸೀಮೆಯ ರಗಡ್ ಲವ್ ಸ್ಟೋರಿಗೆ ಯಾವ ಸರ್ಟಿಫಿಕೇಟ್ ಕೊಡ್ತಾರೋ ನೋಡ್ಬೇಕು. ಅದೇನೆ ಇರಲಿ ಚಿತ್ರದ ಟ್ರೈಲರ್ ಡಾಲಿ ಫ್ಯಾನ್ಸ್ಗಳಿಗೆ ಪುಲ್ ಮೀಲ್ಸ್ ಅಂದ್ರೆ ತಪ್ಪಾಗಲ್ಲ.
Pingback: company website