‘ಸಲಾರ್ ಫ್ಯಾನ್ ಆರ್ಮಿ’ ಪರಿಚಯಿಸಿದ ‘ಹೊಂಬಾಳೆ ಫಿಲ್ಮ್ಸ್’

‘ಸಲಾರ್‌’ ಸಿನಿಮಾ  ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಪ್ರಚಾರ ಪ್ರಾರಂಭಿಸಿದ್ದು,  ‘ಸಲಾರ್ ಫ್ಯಾನ್ ಆರ್ಮಿ’ ಸೇರಲು ಅಭಿಮಾನಿಗಳಿಗೆ ಕರೆ ನೀಡಿದೆ.

ಚಿತ್ರ ತಯಾರಕರು ‘ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ಸಲಾರ್ ಫಿಲ್ಟರ್’ ನ್ನು ಬಳಸಲು ವಿನಂತಿ ಮಾಡಿದ್ದಾರೆ. ಸೆಲ್ಫಿ ತೆಗೆದು https://www.salaar.army ವೆಬ್‌ಸೈಟ್‌ನಲ್ಲಿ ವಿವರಗಳನ್ನು ಸಲ್ಲಿಸುವಂತೆ ಹೊಂಬಾಳೆ ಫಿಲ್ಮ್ಸ್ ಕೇಳಿಕೊಂಡಿದೆ.

ಇದರಲ್ಲಿ ಭಾಗವಹಿಸುವವರು ಹೊಂಬಾಳೆ ಫಿಲ್ಮ್ಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ಸಲಾರ್ ಮರ್ಚೈಂಡೈಸ್ ಮೇಲೆ ಡಿಸ್ಕೌಂಟ್ ಸಹ ಪಡೆಯಲಿದ್ದಾರೆ.  ಭಾಗವಹಿಸುವ ಮೊದಲ 100 ಅಭಿಮಾನಿಗಳಿಗೆ ಮಾತ್ರ ಈ ಪ್ರಯೋಜನಗಳು ಸಿಗಲಿವೆ.

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ ”ಸಲಾರ್’ ಸಿನಿಮಾದ ಟ್ರೇಲರ್ ಇನ್ನಷ್ಟೇ ಬಹಿರಂಗವಾಗಬೇಕಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್  ಆಕ್ಷನ್ ಪ್ಯಾಕ್ಡ್ ಸಿನಿಮಾ ಆಗಿದ್ದು, ಪಂಚ ಭಾಷೆಗಳಲ್ಲಿ ತೆರೆಕಾಣಲಿದೆ. ಇದು ಭಾರತ, ಯುರೋಪ್, ಆಫ್ರಿಕಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ.

ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 22ರಂದು ಶಾರುಖ್ ಖಾನ್ ಅವರ ಡಂಕಿ ಸಿನಿಮಾ ಜೊತೆ ಸಲಾರ್ ತೆರೆಗಪ್ಪಳಿಸಲು ಸಿದ್ಧವಾಗಿದೆ.

ಶಾರುಖ್ ಖಾನ್ ಚಿತ್ರದೊಂದಿಗೆ ಹೊಂಬಾಳೆ ಫಿಲ್ಮ್ಸ್ ಎರಡನೇ ಬಾರಿಗೆ ಬಾಕ್ಸ್​ ಆಫೀಸ್​ ಪೈಪೋಟಿ ನಡೆಸಲಿದೆ. ಯಶ್ ಅಭಿನಯದ ”ಕೆಜಿಎಫ್: ಅಧ್ಯಾಯ 1”  ಶಾರುಖ್ ಅವರ ”ಝೀರೋ” 2018ರ ಡಿಸೆಂಬರ್​ 21ರಂದು ತೆರೆಕಂಡಿತ್ತು.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!