ರಜನಿ ಚಿತ್ರದಲ್ಲಿ ಕಪಿಲ್ ದೇವ್ ಅತಿಥಿ ಪಾತ್ರ

ಸೂಪರ್​ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಆಕ್ಷನ್​ ಕಟ್​ ಹೇಳಿರುವ  ಬಹುನಿರೀಕ್ಷಿತ ಸಿನಿಮಾ ‘ಲಾಲ್​ ಸಲಾಮ್​’ ದಲ್ಲಿ ಕ್ರಿಕೆಟ್​ ದಿಗ್ಗಜ ಕಪಿಲ್ ದೇವ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.

ಕ್ರಿಕೆಟ್ ಕಥೆಯಾಧಾರಿತ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಪಿಲ್​ ದೇವ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕಪಿಲ್ ದೇವ್ ತಮ್ಮ ದೃಶ್ಯಗಳಿಗೆ ದನಿ ನೀಡಿದ್ದಾರೆ. ಡಬ್ಬಿಂಗ್ ಕೆಲಸ ಪೂರ್ಣಗೊಂಡಿದ್ದು ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.

ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ 2024ರ ಸಂಕ್ರಾಂತಿ ಸಂದರ್ಭ ತೆರೆಕಾಣಲಿದೆ. ಚಿತ್ರ ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಕಪಿಲ್ ದೇವ್ ಹೊರತುಪಡಿಸಿ ಜೀವಿತಾ ರಾಜಶೇಖರ್ ಈ ಚಿತ್ರದಲ್ಲಿ ರಜನಿಕಾಂತ್ ಅವರ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿರೋಷಾ, ತಂಬಿ ರಾಮಯ್ಯ, ಸೆಂಥಿಲ್ ಮತ್ತು ತಂಗದುರೈ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಖ್ಯಾತ ಗಾಯಕ ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. 2024ರ ಜನವರಿಯಲ್ಲಿ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಸೂಪರ್‌ ಸ್ಟಾರ್ ರಜನಿಕಾಂತ್​ ಕೊನೆಯದಾಗಿ ಜೈಲರ್‌ನಲ್ಲಿ ಕಾಣಿಸಿಕೊಂಡರು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆಯಿತು. ಅವರ ಮುಂದಿನ ಸಿನಿಮಾಗಳ ಮೇಲೆಯೂ ಭಾರಿ ನಿರೀಕ್ಷೆಗಳಿವೆ. ಇತ್ತೀಚೆಗಷ್ಟೇ ‘ಲಾಲ್​ ಸಲಾಮ್​’ ಟೀಸರ್​ ಅನಾವರಣಗೊಂಡು ಕುತೂಹಲ ಹೆಚ್ಚಿಸಿದೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!