ಮಮ್ಮುಟ್ಟಿ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ!

ಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ ‘ಟರ್ಬೊ’ದಲ್ಲಿ ರಾಜ್ ಬಿ ಶೆಟ್ಟಿ ಸ್ಕ್ರೀನ್​ ಶೇರ್​ ಮಾಡಲಿದ್ದಾರೆ.

ಸ್ವತ: ಮಮ್ಮುಟ್ಟಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ  ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿಯನ್ನು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದಾರೆ. ‘ಟರ್ಬೊ’ದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವೈಶಾಖ್ ಈ ಚಿತ್ರ ನಿರ್ದೇಶನ ಮಾಡಿದ್ದು, ಮಲಯಾಳಂ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ರಾಜ್ ಬಿ ಶೆಟ್ಟಿ ಶೀಘ್ರದಲ್ಲೇ ಚಿತ್ರತಂಡ ಸೇರಲಿದ್ದಾರೆ.

‘ಟರ್ಬೋ’ ಸಿನಿಮಾಗೆ ಮಲಯಾಳಂ ಮೆಗಾಸ್ಟಾರ್ ನಿರ್ಮಾಣ ಸಂಸ್ಥೆ ಮಮ್ಮುಟ್ಟಿ ಕಂಪನಿ ಹಣ ಹೂಡುತ್ತಿದೆ. ಮಿದುನ್ ಮಾನ್ಯೂಯೆಲ್ ಥಾಮಸ್ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದಾರೆ.

ರಾಜ್ ಬಿ ಶೆಟ್ಟಿ ಅವರು ಕನ್ನಡದಲ್ಲಿ ಇದುವರೆಗೆ 11 ಸಿನಿಮಾಗಳನ್ನು ಮಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅವರಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು ಸಾಕಷ್ಟು ಆಫರ್ ಗಳು ಬರುತ್ತಿವೆ.

ರಾಜ್ ಬಿ ಶೆಟ್ಟಿ ನಟನೆ, ನಿರ್ದೇಶನದ ‘ ಸ್ವಾತಿ ಮುತ್ತಿನ ಮಳೆ ಹನಿಯೇ ‘ ಚಿತ್ರ ನವೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಮೂಲಕ ರಮ್ಯ ಅವರು ನಿರ್ಮಾಪಕಿ ಆಗಿ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!