ಏಪ್ರಿಲ್ 1ರಂದು ‘ಸಂಜು ವೆಡ್ಸ್ ಗೀತಾ 2’ ರಿಲೀಸ್

‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು 2024ರ ಏಪ್ರಿಲ್ 1ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ನಾಗಶೇಖರ್ ಮೂವೀಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಗರ ಕಿಟ್ಟಿ, ರಚಿತಾ ರಾಮ್ ಲೀಡ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಕನಕಪುರ ರಸ್ತೆಯ ಫಾರಂ ಹೌಸ್​ನಲ್ಲಿ ‘ಸಂಜು ವೆಡ್ಸ್ ಗೀತಾ 2’ರ ಚಿತ್ರೀಕರಣ ಭರದಿಂದ ಸಾಗಿದೆ. 10ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಾಯಕ, ನಾಯಕಿಗೆ ಲಕ್ಷುರಿ ಕಾರ್ ಗಿಫ್ಟ್ ಕೊಡುವ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆ ಹಿಡಿದಿದ್ದಾರೆ. ಈ ಶೂಟಿಂಗ್​ ಸೀನ್​​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

”ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಸೀಕ್ವೆಲ್​​ ನಿರ್ಮಾಣಕ್ಕೆ ಕಾರಣ. ಮೊದಲ ಹಂತದಲ್ಲಿ ಈಗಾಗಲೇ 5-6 ದಿನದ ಶೂಟಿಂಗ್ ನಡೆಸಿದ್ದೇವೆ. ಡಿಸೆಂಬರ್ 2ರಿಂದ ಬೆಂಗಳೂರಲ್ಲಿ, ಡಿ. 9ರಿಂದ ಸ್ವಿಟ್ಜರ್ಲ್ಯಾಂಡ್​ನಲ್ಲಿ 12 ದಿನಗಳ ಶೂಟಿಂಗ್ ಮುಗಿಸಿ ನಂತರ ಮುಂಬೈ, ಹೈದರಾಬಾದ್​ನಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. 2024ರ ಏಪ್ರಿಲ್ 1ರಂದು ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಇದೆ. ಅದೇ ದಿನ ಮೊದಲ ಭಾಗ ಬಿಡುಗಡೆಯಾಗಿತ್ತು. ಡಿಸೆಂಬರ್ 29ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ” ಎಂದು  ನಿರ್ದೇಶಕ ನಾಗಶೇಖರ್ ಮಾಹಿತಿ ನೀಡಿದ್ದಾರೆ.

ರಂಗಾಯಣ ರಘು, ಸಾಧು ಕೋಕಿಲ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಶ್ರೀಧರ್ ಸಂಭ್ರಮ್ ಒಳ್ಳೆಯ ಟ್ಯೂನ್ ಕೊಟ್ಟಿದ್ದಾರೆ. ಲೀಡ್ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಉತ್ತಮವಾಗಿ ನಟಿಸುತ್ತಿದ್ದಾರೆ  ಎಂದಿದ್ದಾರೆ.

ಸಂಗೀತ ನಿರ್ದೇಶಕ‌ ಶ್ರೀಧರ ವಿ. ಸಂಭ್ರಮ್, ಚಿತ್ರದಲ್ಲಿ 5 ಹಾಡುಗಳಿದ್ದು, ಕವಿರಾಜ ಒಳ್ಳೆ ಸಾಹಿತ್ಯ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ನಿರ್ಮಾಪಕ ಚಲವಾದಿ ಕುಮಾರ್‌,  ನಾಗಶೇಖರ್ ನಾನು ಇಂಜಿನಿಯರಿಂಗ್ ಕ್ಲಾಸ್ ಮೇಟ್ಸ್. ಸ್ಕ್ರಿಪ್ಟ್ ಕೆಲಸದಲ್ಲೂ ನಾನು ಅವರ ಜೊತೆಗಿದ್ದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.‌ ಮುಂದೆಯೂ ಒಳ್ಳೆ ಸಿನಿಮಾಗಳನ್ನು ನಿರ್ಮಾಣ‌ ಮಾಡುವೆ ಎಂದಿದ್ದಾರೆ.

ಛಾಯಾಗ್ರಾಹಕ ಸತ್ಯ ಹೆಗಡೆ,  14 ವರ್ಷದ ಹಿಂದೆ ಸಿನಿಮಾ ಮಾಡಿದ್ದು, ಪ್ರಸ್ತುತ ಟೆಕ್ನಾಲಜಿ ಬದಲಾಗಿದೆ.‌ ಈ‌ ಸಿನಿಮಾವನ್ನು ಇನ್ನೂ ಚೆನ್ನಾಗಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!