ವಿಜಯ ರಾಘವೇಂದ್ರ ಹಾಗೂ ಸೋನು ಗೌಡ ನಟಿಸಿರುವ ಮರೀಚಿ ಚಿತ್ರ ಡಿಸೆಂಬರ್ 8 ರಂದು ಬಿಡುಗಡೆ ಆಗಲಿದೆ.
ಈಗಾಗಲೇ ಚಿತ್ರದ ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂತಾರ ಚಿತ್ರದ ನಟಿ ಸಪ್ತಮಿ ಗೌಡ ಅವರು, ಮರೀಚಿ ಚಿತ್ರದ ಹಾಡು ಉತ್ತಮವಾಗಿ ಮೂಡಿ ಬಂದಿದೆ. ಸಿನಿ ಆಟೋಗ್ರಫಿ ಉತ್ತಮವಾಗಿದೆ. ಚಿತ್ರ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದ್ದಾರೆ.
ಮರೀಚಿ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಆಗಿದೆ. ಇಲ್ಲಿ ಲವ್ ಸ್ಟೋರಿ ಕೂಡ ಇದೆ. ಚಿತ್ರವನ್ನು ಸಿದ್ಧ್ರುವ್ ಅವರು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವ ಸಿದ್ಧ್ರುವ್, ನಮ್ಮ ಮುಂದೆ 150 ಟೈಟಲ್ ಗಳು ಇದ್ದವು. ಆದರೆ ಋಷಿ ಹೆಸರು ಇರುವ ಟೈಟಲ್ ಬೇಕಾಗಿತ್ತು. ಇದಕ್ಕಾಗಿ ಮರೀಚಿ ಹೆಸರನ್ನು ಆಯ್ಕೆ ಮಾಡಿದ್ದೇವೆ. ಮರೀಚಿ ಎಂದರೆ ಬ್ರಹ್ಮನ ಮಗ. ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.
ನಟ ವಿಜಯ ರಾಘವೇಂದ್ರ ಅವರು ಚಿತ್ರದಲ್ಲಿ ಪೊಲೀಸ್ ಪಾತ್ರವನ್ನು ಮಾಡಿದ್ದಾರೆ.
ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರ ಜೊತೆಗೆ ಹೆಂಡತಿ ಪಾತ್ರದಲ್ಲಿ ನಟಿಸಿದ್ದ ಸೋನು ಗೌಡ ಅವರು ಈ ಚಿತ್ರದಲ್ಲಿ ಮತ್ತೆ ವಿಜಯ ರಾಘವೇಂದ್ರ ಅವರ ಪತ್ನಿಯಾಗಿ ನಟನೆ ಮಾಡಿದ್ದಾರೆ.
ಈ ಚಿತ್ರದಲ್ಲಿ ಅಭಿದಾಸ್, ಸ್ಪಂದನ ಸೋಮಣ್ಣ, ಶೃತಿ ಪಾಟೀಲ್, ಗೋಪಾಲಕೃಷ್ಣ ದೇಶಪಾಂಡೆ ಇತರರು ನಟಿಸಿದ್ದಾರೆ.
ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ್ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರತಂಡ ತೆರೆಯ ಮೇಲೆ ಚಿತ್ರವನ್ನು ತರುವ ನಿಟ್ಟಿನಲ್ಲಿ ಕೆಲಸ ನಡೆಸಿದೆ.
____

Be the first to comment