300 ಕೋಟಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಭಾಸ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್  300 ಕೋಟಿಯ ಅದ್ಧೂರಿ ಬಜೆಟ್ ನ  ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸೀತಾ ರಾಮಂ ಚಿತ್ರದ ಮೂಲಕ ಭರ್ಜರಿ ಯಶಸ್ಸು ಗಳಿಸಿದ್ದ ನಿರ್ದೇಶಕ ಹನು ರಾಘವಪುಡಿ ಅವರ ನಿರ್ದೇಶನದಲ್ಲಿ ಪ್ರಭಾಸ್ ಸಿನಿಮಾ ಮಾಡಲಿದ್ದಾರೆ. ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಮೂಡಿ ಬರಲಿದೆ.

ಈ ಪ್ಯಾನ್ ಇಂಡಿಯಾ ಚಿತ್ರವನ್ನು ವಿಶ್ವದಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಯುವಿ ಕ್ರಿಯೇಷನ್ಸ್ ಈ ಚಿತ್ರವನ್ನು ಬಾಲಿವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸಲಿದೆ ಎಂದು ವರದಿಯಾಗಿದೆ.

ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ ನಲ್ಲಿ ಸಲಾರ್ ಬಿಡುಗಡೆಯಾಗಲಿದೆ. ಆ ನಂತರ ‘ಪ್ರಾಜೆಕ್ಟ್ ಕೆ’,  ಮಾರುತಿ ನಿರ್ದೇಶನದ ‘ರಾಜಾ ಡಿಲಕ್ಸ್ ಸಿನಿಮಾಗೆ ಪ್ರಭಾಸ್  ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

 ಈಶ್ವರ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಭಾಸ್,  ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!