ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು ನಿರ್ಮಿಸಿ , ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿರುವ ಜಲಪಾತ ಸಿನಿಮಾ ಯಶಸ್ವಿಯಾಗಿ ತನ್ನ ಅಭಿಯಾನವನ್ನು ಮುಂದುವರೆಸುತ್ತಾ ದಾಖಲೆಯ 6 ನೇ ವಾರಕ್ಕೆ ಕಾಲಿಟ್ಟಿದೆ.
ಪರಿಸರ ರಕ್ಷಣೆಯ ಕಾಳಜಿ ಹೊಂದಿದ ಈ ವಿಶಿಷ್ಟ ಕಥೆ ಯ ಸಿನಿಮಾ ಪೂರ್ಣ ಪ್ರಮಾಣದ ಮಲೆನಾಡ ಕಲಾವಿದ – ತಂತ್ರಜ್ಞರ ಸೃಜನಶೀಲತೆಯಿಂದ ಕೂಡಿದೆ.
ಪ್ರಮೋದ್ ಶೆಟ್ಟಿ ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿಪೂರ್ವ ಖ್ಯಾತಿಯ ರಜನೀಶ್ – ಶೃಂಗೇರಿ ಯ ರಂಗಪ್ರತಿಭೆ ನಾಗಶ್ರೀ ಬೇಗಾರ್ ನಾಯಕ – ನಾಯಕಿಯರಾಗಿದ್ದಾರೆ.
ಚಿಕ್ಕಮಗಳೂರಿನ ಬಹುಮುಖ ಪ್ರತಿಭೆ ರೇಖಾ ಪ್ರೇಮ್ ಕುಮಾರ್ , ಬಿ ಎಲ್ ರವಿಕುಮಾರ್ ಅಭಿಶೇಕ್ ಹೆಬ್ಬಾರ್ , ಬಯನ ಎ ಎಸ್ , ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ವಿಶ್ವನಾಥ್ ಎಸ್ ಎನ್ , ಚಂದ್ರಶೇಖರ ತುಂಬರಮನೆ , ಎಂ ಎನ್ ದತ್ತಾತ್ರೀ , ನಟರಾಜ ರಾವ್ , ವಿಶ್ವನಾಥ್ ಶೆಟ್ಟಿ ಗಂಡಘಟ್ಟ , ಕಾರ್ತಿಕ್ ಎ , ವೈಶಾಲಿ , ಸುನೀತಾ , ಸ್ವಾತಿ , ಜ್ಯೋತಿ ಕಾಮತ್ , ಶ್ರೀಮತಿ , ಶಂಕರ್ , ಗಿರೀಶ್ , ರಾಧಾಕೃಷ್ಣ , ವಿನಯ್ ರೇ , ಅರೆಹಳ್ಳ ,ಪ್ರದೀಪ , ಯಶ್ವಂತ್ , ರಶ್ಮಿ ಹೇರ್ಳೆ , ಉಮೇಶ್ ಕಾಸರವಳ್ಳಿ , ಪ್ರಸನ್ನ , ಶ್ರೀ ಹರ್ಷ ಜೆ ಎಮ್ , ಸಂತೋಷ್ , ಹರಿಪ್ರಸಾದ್ ಕುಮಾರ್ ಕುಂಟಿಕಾನ ಮಠ , ಎಮ್ ಆರ್ ಸುರೇಶ್ , ಚಿದಾನಂದ ಹೆಗ್ಗಾರ್ , ಗಾನಮೂರ್ತಿ , ವಿಜಯಲಕ್ಷ್ಮ್ಮೀ , ಸುಧಾಕರ ಶೆಟ್ಟಿ , ರೂಪೇಶ್ , ರಮಂತ , ನಂದೀಪ್, ಅಭಿ ದಿಲೀಪ್ , ದೀಪಕ್ ಮೊದಲಾದ ರಂಗ ಕಲಾವಿದರು ಅಭಿನಯಿಸಿದ್ದಾರೆ.
ಸಾದ್ವಿನಿ ಕೊಪ್ಪ ಸಂಗೀತ , ವಿನು ಮನಸು ಹಿನ್ನೆಲೆ ಸಂಗೀತ , ಶಶೀರ ಶೃಂಗೇರಿ ಛಾಯಾಗ್ರಹಣ , ಅವಿನಾಶ್ ಶೃಂಗೇರಿ ಸಂಕಲನವನ್ನು ಜಲಪಾತ ಹೊಂದಿದೆ.
ಯಾವುದೇ ಸ್ಟಾರ್ ಗಳು ಇಲ್ಲದ ಆದರೆ ಕಂಟೆಂಟ್ ಗಟ್ಟಿಯಿರುವ ಸಿಂಪಲ್ ಚಿತ್ರವನ್ನು ಜನ ಸಿಂಪಲ್ ಆಗಿ ಗೆಲ್ಲಿಸುತ್ತಿರುವ ಅಪರೂಪದ ವಿದ್ಯಮಾನವಿದು.
ಕನ್ನದ ಸಿನಿಮಾ ರಂಗ ವೆಂಬ ಮಹಾ ಸಾಗರದಲ್ಲಿ ಜಲಪಾತ ದ ಗೆಲುವು ಹೊಸದೇ ವ್ಯಾಖ್ಯಾನ ಬರೆದಿದೆ.
***********
Be the first to comment