ಸ್ಯಾಂಡಲ್‌ವುಡ್ ಯುವ ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜತೆ ಅವರು ಸಪ್ತಪದಿ ತುಳಿದಿದ್ದಾರೆ.
ಜೆ ಪಿ ನಗರದ ಸಂಸ್ಕ್ರತಿ ಗೋಕುಲಂ ಕಲ್ಯಾಣ ಮಂಟಪದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಸಿನಿ ಗಣ್ಯರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ವಾಸುಕಿ ವೈಭವ್ – ಬೃಂದಾ ವಿಕ್ರಮ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿರಲಿಲ್ಲ. ಬಿಗ್ಬಾಸ್ನಿಂದ ಚಂದನಾ ಅನಂತಕೃಷ್ಣ – ವಾಸುಕಿ ಒಳ್ಳೆಯ ಸ್ನೇಹಿತರಾಗಿದ್ದರು. ಈ ಜೋಡಿಯ ಹೆಸರಲ್ಲಿ ಅನೇಕ ಫ್ಯಾನ್ಸ್ ಪೇಜ್ಗಳು ಕ್ರಿಯೇಟ್ ಆಗಿದ್ದವು. ಇಬ್ಬರು ಪ್ರೀತಿಸುತ್ತಿದ್ದಾರೆ, ಭವಿಷ್ಯದಲ್ಲಿ ಈ ಜೋಡಿ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಇದೀಗ ವಾಸುಕಿ ವೈಭವ್ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
ಬೃಂದಾ ರಂಗಕರ್ಮಿ ಮತ್ತು ಶಿಕ್ಷಕಿ ಆಗಿದ್ದಾರೆ. ವಾಸುಕಿ ವೈಭವ್ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಖ್ಯಾತಿ ಪಡೆಯುತ್ತಿದ್ದಾರೆ. ವಾಸುಕಿ ವೈಭವ್ 2016ರಲ್ಲಿ ತೆರೆಗೆ ಬಂದ ʼಊರ್ವಿʼ ಚಿತ್ರದ ಮೂಲಕ ಅವರು ನಟನೆಯನ್ನು ಪ್ರಾರಂಭಿಸಿದ್ದರು. ವಸುಂಧರಾ (2014), ಪಟ್ಟಾಭಿಷೇಕ (2015), ರಾಮ ರಾಮ ರೇ (2016) , ಹ್ಯಾಪಿ ನ್ಯೂ ಇಯರ್ (2017) , ವಿಸ್ಮಯ ಹೀಗೆ ಹಲವಾರು ಚಿತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ.
ಚೂರಿಕಟ್ಟೆ (2018), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಹರಿಕಥೆ ಅಲ್ಲ ಗಿರಿಕಥೆ’, ‘ತತ್ಸಮ ತದ್ಭವʼ ಇವರ ಸಂಗೀತ ಸಂಯೋಜನೆಯ ಪ್ರಮುಖ ಚಿತ್ರಗಳು ಆಗಿವೆ.
Be the first to comment