ನ.17ಕ್ಕೆ ‘ಬಾಯ್ ‘ಚಿತ್ರ ರಾಜ್ಯಾದ್ಯಂತ ಬಿಡುಗಡೆ

ನಮ್ಮ ದೇಶವೇ ಸಂಸ್ಕೃತಿಗಳಿಂದ ಕೂಡಿದೆ. ಒಂದ ಎರಡಾ ಹಲವಾರು ಸಂಸ್ಕೃತಿಗಳು ಇದೆ. ಅದರಲ್ಲಿ ಬಂಜರ ಸಮುದಾಯದ ಸಂಸ್ಕೃತಿ ಕೂಡ ಆಕರ್ಷಣೆ ಮಾಡುತ್ತದೆ. ನೆಲದ ಸಂಸ್ಕೃತಿ, ಸಮುದಾಯದ ಸಂಸ್ಕೃತಿಯನ್ನ ತೆರೆ ಮೇಲೆ ತಂದು ಸೋತವರಿಲ್ಲ. ಇದೀಗ ಬಂಜಾರ ಸಮುದಾಯದ ಸಂಸ್ಕೃತಿಯನ್ನು ತೆರೆ ಮೇಲೆ ತರಲು ಯುವ ರೆಡಿಯಾಗಿದ್ದಾರೆ. ಅದರ ಹೆಸರು ಬಾಯ್.

ಬಾಯ್ ಎಂದರೆ ಸೋದರತ್ವ. ಈ ಸೋದರತ್ವ ಮೂಲಕ ಬಂಜಾರ ಸಂಸ್ಕೃತಿ ತಿಳಿಸಲು ಹೊರಟಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಹಾಡು ರಿಲೀಸ್ ಆಗಿದೆ. ಖಳ ನಟ ಚಲುವರಾಜ್ ಟ್ರೇಲರ್ ಲಾಂಚ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ‌.

ನಟ, ನಿರ್ದೇಶಕ ಯುವ ಮಾತನಾಡಿ, ಇದು ಮಾಸ್ ಓರಿಯೆಂಟ್ ಸಿನಿಮಾ. ಇದರಲ್ಲಿ ಬಂಜಾರ ಸಮುದಾಯದ ಸಂಪ್ರದಾಯ ತೋರಿಸಿದ್ದೇವೆ. ಸಿನಿಮಾ ಅಂತು ಅದ್ಭುತವಾಗಿ ಮೂಡಿ ಬಂದಿದೆ. ಇದು ಫ್ಯಾಮಿಯೆಲ್ಲಾ ಕೂತು ನೋಡುವಂತ, ಫ್ಯಾಮಿಲಿ ಒರಿಯೆಂಟೆಡ್ ಸಿನಿಮಾ ಆಗಿದೆ. ಇದಕ್ಕೆ ನೀವೆಲ್ಲಾ‌ ಸಪೋರ್ಟ್ ಮಾಡಿ, ಬೆಂಬಲ ನೀಡಿ. ಇಡೀ ಟೀಂ ಬೆಂಬಲ ಅಂತು ತುಂಬಾ ಚೆನ್ನಾಗಿ ಇತ್ತು. ಬೆಳಗಾವಿಯ ಹುಡುಗ ನಾನು. ಕನಸು ಹೊತ್ತು ಬೆಂಗಳೂರಿಗೆ ಬಂದೆ. ಗ್ಯಾಂಗ ಸ್ಟರ್, ಜೂನಿಯರ್ ಆರ್ಟಿಸ್ಟ್ ಆಗಿ ಕೂಡ ಮಾಡಿದ್ದೀನಿ. ಥ್ರಿಲ್ಲರ್ ಮಂಜು ಸರ್ ಕೂಡ ಒಮ್ಮೆ‌ ಹೇಳಿದ್ದರು. ನೀನು ಒಳ್ಳೆ ಕಲಾವಿದ ಆಗಬಹುದು ಅಂತ. ಅಲ್ಲಿಂದ ಪ್ರಯತ್ನ ಶುರು ಮಾಡಿದೆ. ಬಂಜಾರ ಸಮುದಾಯ ಸಂಸ್ಕೃತಿಯನ್ನು ತೆರೆ ಮೇಲೆ ತರಬೇಕೆಂದು ನಿರ್ದೇಶನಕ್ಕೆ ಇಳಿದೆ. ಸಿನಿಮಾ ರೆಡಿ ಇದೆ. ಇದೇ ತಿಂಗಳ 17ಕ್ಕೆ ತೆರೆಗೆ ಬರಲಿದೆ ಎಂದಿದ್ದಾರೆ.

ಈ ಸಿನಿಮಾಗೆ ಕಥೆ ಬರೆದ ಸುರೇಶ್ ಮಾತನಾಡಿ, ಈ ಸಿನಿಮಾಗೆ ಕಥೆ ಬರೆಯಲು ಅಪ್ಪು ಸರ್ ಸ್ಪೂರ್ತಿ. ನಾನು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಅಲ್ಲಿ ಶಾಲೆಗೆ ಮಕ್ಕಳನ್ನು ಬಿಡಲು ಬರುತ್ತಿದ್ದರು. ಅಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದೆ. ಅವರು ಕೂಡ ಏನ್ರಿ ಪೊಲೀಸಪ್ಪ ಚೆನ್ನಾಗಿದ್ದೀರಾ ಅಂತ ಮಾತನಾಡಿಸೋರು. ಇವತ್ತು ಅವರನ್ನ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ. ಅವರಿಗೆ ನಾನು ಹೇಳಿದ್ದೆ, ಸರ್ ನಾನು ನಿಮ್ಗೋಸ್ಕರ ಕಥೆ ಬರಿಬೇಕು. ಅದು ಬಂಜಾರ ಹಾಗೂ ಕನ್ನಡ ಭಾಷೆಯಲ್ಲಿರಬೇಕು ಸರ್ ಎಂದಿದ್ದ. ಆಗ ಅವರು ಬರಿಯಪ್ಪ, ನೀನು ಪೋಲಿಸ್ ಆಗಿದ್ದು ಸ್ಟೋರಿ ಬರೆಯೋಕೆ ಬರುತ್ತಾ ಎಂದಿದ್ದರು. ಇದು ಅವರಿಗೋಸ್ಕರ ಬರೆದ ಕಥೆ. ಅವರು ಇದ್ದಿದ್ದರು ಇವತ್ತು, ಇಲ್ಲಿಗೆ ಬರ್ತಾ ಇದ್ದರು ಎಂದು ಬೇಸರ ಹೊರ ಹಾಕಿದ್ದಾರೆ.

ನಾಯಕಿ ಪೂಜಾ ಮಾತನಾಡಿ, ನನ್ನದು ವಿದೇಶಿ ಹುಡುಗಿಯ ಪಾತ್ರ. ಬಂಜಾರ ಕಲೆ ಮತ್ತು ಸಂಸ್ಕೃತಿಯ ಅಧ್ಯನಕ್ಕೆ ಬಂದಿರುತ್ತೇನೆ. ಮುಂದೆ ಏನೆಲ್ಲಾ ಆಗುತ್ತೆ ಎಂಬುದನ್ನು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ ಎಂದಿದ್ದಾರೆ.

ಸಿನಿಮಾ ಈಗಾಗಲೇ ತನ್ನೆಲ್ಲಾ ಕೆಲಸ ಮುಗಿಸಿದ್ದು, ರಿಲೀಸ್ ಗೆ ರೆಡಿಯಾಗಿದೆ. ಇದೇ ತಿಂಗಳ 17ಕ್ಕೆ ತೆರೆಗೆ ಬರಲಿದ್ದು, ಇಡೀ ತಂಡ ಕುತೂಹಕದಿಂದ ಕಾಯುತ್ತಿದೆ. ಈ ಸಿನಿಮಾಗೆ ಮಾಲಾಶ್ರೀ ಸುರೇಶ್ ಬಂಡವಾಳ ಹೂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!