ನವಂಬರ್ 17ರಂದು ತೆರೆ ಕಾಣಲಿರುವ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಟ್ರೈಲರ್, ಹತ್ತು ವರ್ಷದ ನಂತರದ ಬದಲಾದ ಕಾಲಘಟ್ಟದ ಕಥೆ ಹೇಳುತ್ತಿದೆ.
ಒಂದು ದಶಕದ ಬಳಿಕ ಜೈಲಿನಿಂದ ಹೊರಬರುವ ಮನು ಎದುರಿಸುವ ವಾಸ್ತವದ ಸಂಕಷ್ಟಗಳು ಟ್ರೈಲರ್ ನಲ್ಲಿ ಕಂಡು ಬಂದಿದೆ. ಟ್ರೈಲರ್ ಮೂಲಕ ಮನು ಹಾಗೂ ಪ್ರಿಯಾ ಅವರ ಹತ್ತು ವರ್ಷದ ಬಳಿಕದ ಬದುಕನ್ನು ತೆರೆದಿಡುವ ಯತ್ನ ಮಾಡಲಾಗಿದೆ.
ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಸೆಪ್ಟಂಬರ್ 1ರಂದು ತೆರೆಕಂಡಿತ್ತು. ಎರಡು ತಿಂಗಳ ಬಳಿಕ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಬಿಡುಗಡೆಗೆ ಸಿದ್ಧಗೊಂಡಿದೆ.
ಟ್ರೈಲರ್ ನಲ್ಲಿ ಜೈಲಿನಿಂದ ಹೊರಗೆ ಬಂದ ಬಳಿಕ ಮನು ತನ್ನ ಜೀವನವನ್ನು ಕಟ್ಟಿಕೊಳ್ಳಲು ಪಡುವ ಶ್ರಮವನ್ನು ತೋರಿಸಿದೆ. ಇದರ ಜೊತೆಗೆ ಮನು, ಪ್ರಿಯಾಳ ಕೆಸೆಟ್ ಕೇಳಿಸಿಕೊಂಡು ಹಡುವ ಸಂಕಟಗಳು ಇಲ್ಲಿದೆ. ಕೊನೆಗೂ ಪ್ರಿಯಾಳನ್ನು ಕಾಣುವ ಮನು, ಪ್ರಿಯಾ ಹೇಳುವ ಮತ್ತೆ ಭೇಟಿ ಮಾಡದಿರೋಣ ಎನ್ನುವ ಮಾತು ಎಲ್ಲವೂ ಬದಲಾಗಿದೆ ಎನ್ನುವುದನ್ನು ಸೂಚಿಸುತ್ತದೆ.
ಹೇಮಂತ್ ಎಂ ರಾವ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಚ್ಚುತ್ ಕುಮಾರ್, ಪವಿತ್ರ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಚರಣ್ ರಾಜ್ ಅವರು ಹಿನ್ನೆಲೆ ಸಂಗೀತ ನೀಡಿದ್ದು ಗಮನ ಸೆಳೆಯುತ್ತಿದೆ.
__
Be the first to comment