‘ಗೇಮ್​ ಚೇಂಜರ್​’ ಹಾಡು ಲೀಕ್​; ಇಬ್ಬರು ವಶಕ್ಕೆ

ರಾಮ್​ಚರಣ್​ ನಟನೆಯ  ‘ಗೇಮ್​ ಚೇಂಜರ್​’ ಹಾಡು ಸೋರಿಕೆಗೆ ಕಾರಣವಾದ ಇಬ್ಬರನ್ನು ಸೈಬರ್​ ಪೊಲೀಸರು ಬಂಧಿಸಿದ್ದಾರೆ.

ನಿರ್ದೇಶಕ ಶಂಕರ್​ ಅವರು ಆಕ್ಷನ್​ ಕಟ್​ ಹೇಳುತ್ತಿರುವ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ‘ಗೇಮ್​ ಚೇಂಜರ್​’  ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕೆಲ ವಿಚಾರಗಳು ಸೋರಿಕೆಯಾಗುತ್ತಿವೆ. ಇತ್ತೀಚೆಗೆ ಸಿನಿಮಾದ ಹಾಡು ಲೀಕ್​ ಆಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಸೈಬರ್​ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಒಪ್ಪಿಗೆಯಿಲ್ಲದೇ  ಹಾಡು ಲೀಕ್​ ಆಗಿದ್ದರ ಬಗ್ಗೆ ಕೋಪಗೊಂಡಿದ್ದ ಚಿತ್ರ ತಯಾರಕರು ಅಧಿಕೃತ ದೂರು ದಾಖಲಿಸಿದ್ದರು. ಅಲ್ಲದೇ, ಎಫ್​ಐಆರ್​ನ ಫೋಟೋವನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳನ್ನು ಹಂಚಿಕೊಂಡಿದ್ದರು.

ಲೀಕ್​ ಆದ ಹಾಡು ಒರಿಜಿನಲ್​ ಹಾಡು ಅಲ್ಲ.ಇದು ಜಸ್ಟ್​ ಟೆಸ್ಟಿಂಗ್​ ಹಾಡಾಗಿತ್ತು.  ಸ್ಟಾರ್​ ಗಾಯಕರು ಈ ಹಾಡಿಗೆ ಧ್ವನಿಯಾಗಲಿದ್ದಾರೆ. ಫೈನಲ್​ ಮಿಕ್ಸ್​ನಲ್ಲಿ ಇನ್ನೂ ಸಾಕಷ್ಟು ಕೆಲಸಗಳಿವೆ. ಸೌಂಡ್​ ಮಿಕ್ಸಿಂಗ್​ ನಂತರ ಈ ಹಾಡು ಮತ್ತಷ್ಟು ಚೆನ್ನಾಗಿ ಮೂಡಿ ಬರಲಿದೆ ಎನ್ನಲಾಗಿದೆ.  15 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಸೋರಿಕೆಯಾದ 30 ಸೆಕೆಂಡ್​ಗಳ ಹಾಡು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

 ‘ಗೇಮ್​ ಚೇಂಜರ್​’ ಚಿತ್ರದ ಮೊದಲ ಹಾಡು ‘ಜರಗಂಡಿ’ಯನ್ನು ದೀಪಾವಳಿ ಸಮಯದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಹಾಡಿಗೆ ಎಸ್​.ತಮನ್​ ಸಂಗೀತ ಸಂಯೋಜಿಸಿದ್ದಾರೆ. ಹಾಡು ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಆಗಸ್ಟ್​ ನಂತರ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

‘ಗೇಮ್​ ಚೇಂಜರ್​’ ಸಿನಿಮಾವನ್ನು  ದಿಲ್​ ರಾಜು ಅದ್ಧೂರಿ ಬಜೆಟ್​ನಲ್ಲಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಮ್​ಚರಣ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್​ಚರಣ್​ಗೆ ನಾಯಕಿಯಾಗಿ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಹಿರಿಯ ನಟ ಎಸ್​.ಜೆ ಸೂರ್ಯ, ಅಂಜಲಿ, ಶ್ರೀಕಾಂತ್​, ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!