ಕಮಲ್ ಹಾಸನ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ನಟ ಶಿವಣ್ಣಗೆ ಆಹ್ವಾನ ನೀಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಕಮಲ್ ಹಾಸನ್ 233ನೇ ಸಿನಿಮಾವನ್ನು ಎಚ್.ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣ ಪವರ್ಫುಲ್ ಕ್ಯಾರೆಕ್ಟರ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಮೊದಲ ಸಲ ಶಿವಣ್ಣ ರಜನಿಕಾಂತ್ ಜೊತೆ ‘ಜೈಲರ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಶಿವಣ್ಣನ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದರು.
ಲೋಕೇಶ್ ಕನಗರಾಜ್ ಸಿನಿಮಾ ಮೂಲಕ ಹೊಸ ತಂತ್ರವನ್ನು ಕಂಡುಕೊಂಡಿರೋ ಕಮಲ್ ಹಾಸನ್ ಪರಭಾಷೆಯ ನಟರನ್ನು ತಮ್ಮ ಸಿನಿಮಾ ಕಡೆಗೆ ಸೆಳೆಯುತ್ತಿದ್ದಾರೆ. ಶಿವರಾಜ್ ಕುಮಾರ್ ಉಳಗನಾಯಗನ್ ಕಮಲ್ ಹಾಸನ್ ಜೊತೆಗೆ ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಕಮಲ್ ಹಾಸನ್ ಆಗಲಿ, ಶಿವಣ್ಣ ಆಗಲಿ, ಚಿತ್ರತಂಡವಾಗಲಿ ಮಾಹಿತಿ ಶೇರ್ ಮಾಡಿಲ್ಲ.
ಶಿವಣ್ಣ ನಟನೆಯ ಘೋಸ್ಟ್ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ರಕ್ತಪಾತ ನಡೆಸದ ಘೋಸ್ಟ್ ಪಾತ್ರದಲ್ಲಿ ಶಿವಣ್ಣ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
—–
Post Views: 450
Be the first to comment