Garuda Purana Movie Review : ಕೊಲೆಯ ಬೇಧಿಸುವ ‘ಗರುಡ ಪುರಾಣ’!

ಚಿತ್ರ: ಗರುಡ ಪುರಾಣ

ನಿರ್ದೇಶನ: ಮಂಜುನಾಥ್ ನಾಗಬಾ
ನಿರ್ಮಾಣ: ಸಿಂಧು ಕೆ ಎಂ ಮತ್ತು ಬಿ ಎಲ್ ಯೋಗೇಶ್ ಕುಮಾರ್
ತಾರಾ ಬಳಗ: ಮಂಜುನಾಥ್ ನಾಗಬಾ, ದಿಶಾ ಶೆಟ್ಟಿ, ಚಲವ ರಾಜ್ ಇತರರು.

ರೇಟಿಂಗ್: 3.5

ಅಪರಾಧ ಜಗತ್ತಿನ ಸಾಮಾನ್ಯ ಸಂಗತಿಯಾದ ಕೊಲೆ, ಕಿಡ್ನಾಪ್ ಕೇಸನ್ನು ಜ್ಯೋತಿಷ್ಯದ ಸಹಾಯದಿಂದ ಗರುಡ ಪುರಾಣದ ಮೂಲಕ ಭೇದಿಸುವ ಭಿನ್ನ ಚಿತ್ರವಾಗಿ ಗರುಡ ಪುರಾಣ ಈ ವಾರ ತೆರೆಯ ಮುಂದೆ ಬಂದಿದೆ.

ವಯಸ್ಕ ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳು ಸುದ್ದಿ ಮಾಡುವ ಬೆನ್ನಲ್ಲೇ ನಾಯಕಿ ನಂದಿನಿಯ ಮಿಸ್ಸಿಂಗ್ ಪ್ರಕರಣ ನಡೆಯುತ್ತದೆ. ಇದರ ಬೆನ್ನಲ್ಲೇ ಆಕೆಯ ಮರ್ಡರ್ ಆಗುತ್ತದೆ. ಪ್ರಕರಣದ ಬೆನ್ನ ಹಿಂದೆ ಬಿದ್ದ ಪೊಲೀಸರು ಜ್ಯೋತಿಷಿಯ ಮೂಲಕ ಗರುಡ ಪುರಾಣದ ಮಾಹಿತಿ ಪಡೆದು ನಂದಿನಿಯ ಕೊಲೆ ರಹಸ್ಯವನ್ನು ಪತ್ತೆ ಹಚ್ಚುತ್ತಾರೆ. ಇದು ಹೇಗೆ ಎನ್ನುವುದಕ್ಕೆ ಉತ್ತರವನ್ನು ಚಿತ್ರ ಮಂದಿರದಲ್ಲಿ ನೋಡಬೇಕು. ಇಲ್ಲಿ ನಿರ್ದೇಶಕರ ಕಲ್ಪನೆ ಪ್ರೇಕ್ಷಕರ ಅಂದಾಜನ್ನು ಮೀರಿಸಿ ಹೊಸ ಪ್ರಯತ್ನವಾಗಿ ಮೂಡಿ ಬಂದಿದೆ.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ನಾಯಕ ಮಂಜುನಾಥ ನಾಗಬಾ ಅವರು ಅಭಿನಯಕ್ಕಿಂತ ನಿರ್ದೇಶನದಲ್ಲಿ ಹೆಚ್ಚು ಪ್ರತಿಭೆ ಮೆರೆಯುವಲ್ಲಿ ಯಶಸ್ವಿ ಆಗಿದ್ದಾರೆ. ನಾಯಕ ನಟಿ ದಿಶಾ ಶೆಟ್ಟಿ ಅವರು ತಮ್ಮ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಭಜರಂಗಿ ಖ್ಯಾತಿಯ ಖಳ ನಾಯಕ ಚೆಲುವರಾಜು ಭಯ ಬೀಳಿಸುವ ಪಾತ್ರದೊಂದಿಗೆ ತೆರೆಯ ಮುಂದೆ ಬಂದಿದ್ದಾರೆ.

ಸುನಿಲ್ ನರಸಿಂಹಮೂರ್ತಿ ಅವರ ಕ್ಯಾಮರಾ ಕೆಲಸ ಸಿನಿಮಾದಲ್ಲಿ ಚೆನ್ನಾಗಿ ಮೂಡಿ ಬಂದಿದೆ . ರಾಕೇಶ್ ಆಚಾರ್ಯ ಸಂಗೀತ, ಚಿತ್ರಕಥೆಗೆ ಪೂರಕವಾಗಿ ಗಮನ ಸೆಳೆಯುತ್ತದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!