ವಿನೋದ್ ಪ್ರಭಾಕರ್ ನಟನೆಯ ಫೈಟರ್ ಚಿತ್ರ ಯಶಸ್ವಿಯಾಗಿ 50ನೇ ದಿನದತ್ತ ಕಾಲಿಟ್ಟಿದೆ.
ನೂತನ್ ಉಮೇಶ್ ನಿರ್ದೇಶನದ ಈ ಚಿತ್ರ ಆಕ್ಷನ್ ಹಾಗೂ ಸೆಂಟಿಮೆಂಟ್ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆಕಾಶ್ ಎಂಟರ್ಪ್ರೈಸಸ್ ಮೂಲಕ ಸೋಮಶೇಖರ್ ಕಟ್ಟಿಗೇನಹಳ್ಳಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಾಯಕ ಹೋರಾಟ ಮಾಡುವ ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಮೂಲಕ ಚಿತ್ರ ಗಮನ ಸೆಳೆದಿದೆ. ತಾಯಿಯ ಪಾತ್ರದಲ್ಲಿ ಹಿರಿಯ ನಟಿ ನಿರೋಷ ಅವರು ಅಭಿನಯಿಸಿದ್ದಾರೆ.
ಚಿತ್ರವನ್ನು ಬೆಂಗಳೂರು, ಪಾಂಡಿಚೇರಿ, ಚಿತ್ರದುರ್ಗ ಅಲ್ಲದೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ನಾಯಕಿಯರಾಗಿ ಚಿತ್ರದಲ್ಲಿ ಲೇಖಾ ಚಂದ್ರ ಹಾಗೂ ಪಾವನ ಗೌಡ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ, ಗಿರಿಜಾ ಲೋಕೇಶ್, ಚೆಲುವರಾಜ್, ಕುರಿ ಪ್ರತಾಪ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ.
ಮುನೀಂದ್ರ ಕೆ.ಪುರ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿರ್ವಹಿಸಿ ಗೆಲುವಿದೆ ಸಹಕರಿಸಿದ್ದಾರೆ. ಗುರುಕಿರಣ್ ಅವರ ಸಂಗೀತ, ಶೇಖರ್ ಚಂದ್ರು ಅವರ ಕ್ಯಾಮರಾ ಕೆಲಸ ಚಿತ್ರಕ್ಕಿದೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶದ ಮೂಲಕ ಚಿತ್ರ ಸಿನಿಪ್ರಿಯರ ಗಮನ ಸೆಳೆದಿದೆ.
Be the first to comment