ಆಂಜನೇಯನ ಗಧೆಯ ಮಹತ್ವ ಹೇಳುವ ಜೈ ಗದಾ ಕೇಸರಿ…

ಕಳೆದ 3 ದಶಕಗಳಿಂದ ಸಹ ನಿರ್ದೇಶಕ, ಸಂಕಲನಕಾರನಾಗಿ ಕೆಲಸ ಮಾಡಿರುವ ಯತೀಶ್ ಕುಮಾರ್ ವಿ. ಈಗ ಸ್ವತಂತ್ರ ನಿರ್ದೇಶಕನಾಗಿದ್ದಾರೆ.

ಈಗಾಗಲೇ ಶ್ರೀರಾಮನ ಪರಮಭಕ್ತ ಶ್ರೀ ಆಂಜನೇಯನ ಕುರಿತಂತೆ ಸಾಕಷ್ಟು ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಆದರೆ, ಆಂಜನೇಯನ ಗದೆಯ ಪ್ರಾಮುಖ್ಯತೆ, ವಿಶೇಷತೆಗಳನ್ನಿಟ್ಟುಕೊಂಡು ಯಾರೂ ಸಹ ಸಿನಿಮಾ ಮಾಡಿಲ್ಲ. ಯತೀಶ್ ಕುಮಾರ್ ಅವರಿಂದ ಅಂಥದ್ದೊಂದು ಪ್ರಯತ್ನ ನಡೆದಿದೆ.

ಆಂಜನೇಯನ ಗದೆಯ ಮಹತ್ವದ ಬಗ್ಗೆ ಹಾಗೂ ಅದರ ಸುತ್ತಲೂ ನಡೆಯುವ ಕಥೆಯನ್ನು ಇಟ್ಟುಕೊಂಡು ‘ಜೈ ಗಧಾಕೇಸರಿ’ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಹೊಸಪೇಟೆ, ಸಿಂಧನೂರು ಸುತ್ತಮುತ್ತ 70 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.

ಬಸವರಾಜ್ ಭಜಂತ್ರಿ ಮೂವೀ ಮೇಕರ್ಸ್‌ ಮೂಲಕ‌ ಬಸವರಾಜ್ ಭಜಂತ್ರಿ ಅವರು ಜೈ ಗಧಾ ಕೇಸರಿ ಚಿತ್ರವನ್ನು ನಿರ್ಮಿಸಿದ್ದು, ಈಶ್ವರ್ ನಾಯಕ್ ಅವರ ಸಹ ನಿರ್ಮಾಣವಿದೆ. ಯತೀಶ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದಲ್ಲಿ ನಾಯಕನಾಗಿ ಈಶ್ವರ್ ನಾಯಕ್, ನಾಯಕಿಯರಾಗಿ ಜೀವಿತಾ ಹಾಗೂ ಕೋಮಲ ನಟಿಸಿದ್ದು, ಅವಿನಾಶ್, ಧರ್ಮ, ಅರವಿಂದರಾವ್, ಹೊನ್ನವಳ್ಳಿ ಕೃಷ್ಣ, ಪ್ರಶಾಂತ್ ಸಿದ್ದಿ, ರಾಜ್ ಚರಣ್ ಬ್ರಹ್ಮವರ್ ಉಳಿದ ಪಾತ್ರಗಳಲ್ಲಿದ್ದಾರೆ.

ಇನ್ನು ಈ ಚಿತ್ರದಲ್ಲಿ 5 ಹಾಡುಗಳಿದ್ದು, ಜಾರ್ಜ್ ಥಾಮಸ್ ಶ್ಯಾಮ್, ಕಾರ್ತೀಕ್ ವೆಂಕಟೇಶ್, ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ೮ ಸಾಹಸ ದೃಶ್ಯಗಳಿಗೆ ಸುಪ್ರೀಂ ಸುಬ್ಬು, ಸೂರಿ, ರಾಮ್ ದೇವ್ ಜಾನಿ, ಅಲ್ಟಿಮೇಟ್ ಶಿವು. ವೈಲೆಂಟ್ ವೇಲು ಸಾಹಸ ಸಂಯೋಜನೆ ಮಾಡಿದ್ದಾರೆ. ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣ, ಪೂಜಾ.ಸಿ. ಅವರ ಸಂಕಲನ, ಮಂಜು ಹೊಸಪೇಟೆ ಸಹನಿರ್ದೇಶನ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!