ಕಿರಣ್ ನಾರಾಯಣ್ ಅವರ ಚೊಚ್ಚಲ ಸಿನಿಮಾ ‘ಸ್ನೇಹರ್ಷಿ’ ನವೆಂಬರ್ 24 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
‘ಸ್ನೇಹರ್ಷಿ’ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಮಹಾನಗರಗಳಲ್ಲಿ ಪ್ರತಿ ದಿನ ಜನರು ಎದುರಿಸುವ ಸಮಸ್ಯೆ ಏನು? ಅವರ ಬದುಕು ಹೇಗೆ? ಎನ್ನುವುದರ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ.
ಕಿರಣ್ ನಾರಾಯಣ್ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ‘ಸ್ನೇಹರ್ಷಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಶ್ರೀ ಲಕ್ಷ್ಮೀ ಬೇಟರಾಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಸ್ನೇಹರ್ಷಿ ಸಿನಿಮಾವನ್ನು ನಿರ್ಮಿಸಲಾಗಿದೆ. ಕಿರಣ್ ನಾರಾಯಣ್ ಅವರ ತಾಯಿ ನಾಗತಿಹಳ್ಳಿ ಪ್ರತಿಭಾ ಕಥೆ ಬರೆದಿದ್ದಾರೆ.
ಚಿತ್ರದಲ್ಲಿ ಸಂಜನಾ ನಾಯಕಿಯಾಗಿ ನಟಿಸಿದ್ದು, ರಂಗನಾಥ್ ಸಂಪತ್, ಸುಧಾ ಬೆಳವಾಡಿ, ಪ್ರಕಾಶ್ ನವೀನ್ ಮತ್ತು ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಿಶೋರ್ ಛಾಯಾಗ್ರಹಣ ಮತ್ತು ಆಕಾಶ್ ಅಯಪ್ಪ ಅವರು ಸಂಗೀತ ಸಂಯೋಜಿಸಿದ್ದಾರೆ.
ಬ್ಯಾಡ್ ಮ್ಯಾನರ್ಸ್, ಸ್ವಾತಿ ಮುತ್ತಿನ ಮಳೆ ಹನಿಯೇ ಮತ್ತು ಶುಗರ್ ಫ್ಯಾಕ್ಟರಿ ಚಿತ್ರಗಳ ಜೊತೆಯೇ ‘ಸ್ನೇಹರ್ಷಿ’ ನವೆಂಬರ್ 24 ರಂದು ಬಿಡುಗಡೆಯಾಗಲಿದೆ.
‘ಸ್ನೇಹರ್ಷಿ’ ಸಿನಿಮಾ ಆಸ್ಟಿನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮತ್ತು ರೇಡಿಯನ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.
—-
Post Views:
207
Be the first to comment