ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ನಟನೆಯ 171ನೇ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಡಿದೆ.
ರಜನಿಕಾಂತ್ ಚಿತ್ರದಲ್ಲಿ ದುನಿಯಾ ವಿಜಯ್ ಅವರು ವಿಲನ್ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ರಜನಿಕಾಂತ್ ಮೇಲೆ ಸಾಕಷ್ಟು ಅಭಿಮಾನ ಹೊಂದಿರುವ ದುನಿಯಾ ವಿಜಯ್ ಅವರು ಈ ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ ಈಗಾಗಲೇ ನಿರ್ದೇಶಕ ಲೋಕೇಶ್ ಹಾಗೂ ದುನಿಯಾ ವಿಜಯ್ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಚಿತ್ರದ ಶೂಟಿಂಗಿಗೆ ಸಾಕಷ್ಟು ಸಮಯವಿದೆ ಎಂದು ತಿಳಿದು ಬಂದಿದೆ.
ರಜನಿಕಾಂತ್ ಅವರು ತಮ್ಮ 170ನೇ ಸಿನಿಮಾದಲ್ಲಿ ನಟಿಸಬೇಕಾಗಿದ್ದು ಈ ಚಿತ್ರದ ಶೂಟಿಂಗ್ ಇನ್ನೂ ಆರಂಭವಾಗಿಲ್ಲ. ಈ ಸಿನಿಮಾ ಮುಗಿದ ಬಳಿಕ 171ನೇ ಸಿನಿಮಾ ಆರಂಭವಾಗಲಿದೆ ಎಂದು ಹೇಳಲಾಗಿದೆ. ಈ ಚಿತ್ರದ ಪಾತ್ರಗಳಿಗಾಗಿ ನಿರ್ದೇಶಕರು ನಟರನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ.
ರಜನಿಕಾಂತ್ ನಟನೆಯ 170ನೇ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. 32 ವರ್ಷಗಳ ಬಳಿಕ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಅವರು ಒಟ್ಟಾಗಿ ನಟಿಸುತ್ತಿದ್ದು ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.
__
Be the first to comment