ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಅಧಿಕೃತವಾಗಿ ನ.1ರಂದು ಘೋಷಣೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ ಎಂದು ಮಾಹಿತಿ ಲಭಿಸಿದೆ. ಕತೆ ಹಾಗೂ ಚಿತ್ರಕಥೆ ಎಲ್ಲವೂ ರೆಡಿಯಾಗಿದೆ. ಚಿತ್ರದ ಫಸ್ಟ್ ಲುಕ್ ಜೊತೆಗೆ ಚಿತ್ರವನ್ನು ಘೋಷಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಕೆವಿಎಎನ್ ಸಂಸ್ಥೆಯ ಸುಪ್ರಿತ್ ಅವರ ಮಾತನಾಡಿ, ‘ಯಶ್ 19 ಹೆಸರಿನಲ್ಲಿ ಸುದ್ದಿಯಾಗುತ್ತಿರುವ ಚಿತ್ರವು ಕೆವಿಎನ್ ಸಂಸ್ಥೆಯೇ ನಿರ್ಮಿಸಲಿದೆ ಎಂಬುದು ನಿಜ. ಗೀತು ಮೋಹನ್‌ದಾಸ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಆದರೆ, ಯಾವಾಗ ಚಿತ್ರದ ಘೋಷಣೆ ಎಂಬುದು ಈಗಲೇ ಹೇಳಲಾಗದು’ ಎಂದಿದ್ದಾರೆ.
ಆದರೆ ಮಾಹಿತಿ ಪ್ರಕಾರ ನ.1ಕ್ಕೆ ಯಶ್ 19 ಸಿನಿಮಾ ಸೆಟ್ಟೇರಲಿದೆ. ರಾಕಿಂಗ್ ಸ್ಟಾರ್ ಯಶ್ ದೇಹದವನ್ನ ಇಳಿಸಿಕೊಳ್ಳುತ್ತಿದ್ದಾರೆ. ಈ ಹಿಂದಿನ ಲುಕ್ ಏನಿತ್ತೋ ಅದೀಗ ಕಾಣಿಸುತ್ತಿಲ್ಲ. ಬೇರೆ ರೀತಿಯಲ್ಲಿ ಯಶ್ ಕಂಗೊಳಿಸುತ್ತಿದ್ದಾರೆ.
ಇದೇ ವೇಳೆ ಯಶ್ ಅವರು ಹಿಂದಿಯಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಅವರಿಗಾಗಿ ಈಗಾಗಲೆ ಲುಕ್ ಟೆಸ್ಟ್ ಕೂಡ ಮಾಡಲಾಗಿದೆಯೆಂದು ಚರ್ಚೆಗಳಾಗುತ್ತಿವೆ.
ರಾಮನ ಪಾತ್ರಧಾರಿ ರಣ್ಬೀರ್ ಕಪೂರ್ ಗಿಂತ ಯಶ್ ಅವರು ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಯಶ್ 100 ರಿಂದ 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆಂಬ ಸುದ್ದಿ ಬಾಲಿವುಡ್ ಅಂಗಳಲ್ಲಿದೆ.
ಈ ನಡುವೆ ಯಶ್ ಅವರನ್ನು ರಾವಣನ ಪಾತ್ರಕ್ಕೆ ಅಪ್ರೋಚ್ ಮಾಡಿದ್ದರೂ ಅವರು ಒಪ್ಪಿಕೊಂಡಿಲ್ಲ ಎಂದು ಸುದ್ದಿ ಕೇಳಿ ಬಂದಿದೆ.
___





Be the first to comment